ತಾಯಿ SSLC ಪರೀಕ್ಷೆ ಬರೆಯುತ್ತಿದ್ದರೆ, ಹೊರಗೆ 4 ತಿಂಗಳ ಮಗುವಿನ ಆರೈಕೆ ಮಾಡಿದ ಆಶಾ ಕಾರ್ಯಕರ್ತೆ!

New Project(6)
Published on

ವಿಜಯಪುರ: ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮಹಿಳೆಯೊಬ್ಬರು ಪರೀಕ್ಷೆ ಬರೆದಿದ್ದಾರೆ. ಇತ್ತ ಮಹಿಳೆಯು ಪರೀಕ್ಷೆ ಬರೆಯುತ್ತಿದ್ದರೆ, ಅತ್ತ ಆಶಾ ಕಾರ್ಯಕರ್ತೆಯು ಮಗುವನ್ನ ಎತ್ತಿಕೊಂಡು ಕಾಯುತ್ತಿದ್ದರು.

ಇಂತಹ ಅಪರೂಪದ ದೃಶ್ಯ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ಕಂಡು ಬಂದಿದೆ. ತಸ್ಲೀಮಾ ಮಕಾನದಾರ್ ಅವರು ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಪರೀಕ್ಷಾರ್ಥಿ. ಬಾಹ್ಯ ಪರೀಕ್ಷಾರ್ಥಿಯಾದ ಇವರು ಮಗುವನ್ನ ಆಶಾಕಾರ್ಯಕರ್ತೆ ಬಳಿ ಬಿಟ್ಟು ಪರೀಕ್ಷಾ ಕೊಠಡಿಗೆ ತೆರಳಿದರು. ಅತ್ತ ತಾಯಿ ಪರೀಕ್ಷೆ ಬರೆಯುತ್ತಿದ್ದರೆ, ಇತ್ತ ಆಶಾ ಕಾರ್ಯಕರ್ತೆ ಉಮಾ ಶಾರದಹಳ್ಳಿ ಅವರು ಮಗುವಿನ ಆರೈಕೆ ಮಾಡುತ್ತಿದ್ದರು. ಈ ದೃಶ್ಯ ವೈರಲ್​ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net