More

    ಪರೀಕ್ಷಾ ಕೇಂದ್ರದಲ್ಲೇ SSLC ವಿದ್ಯಾರ್ಥಿನಿ ಸಾವು: ಸಾವಿಗೂ ಮುನ್ನ ಅನುಶ್ರೀ ಕುಳಿತ್ತಿದ್ದ ಸ್ಥಳ ಬೇರೊಬ್ಬ ವಿದ್ಯಾರ್ಥಿಯದ್ದು…

    ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ಅನುಶ್ರೀ ಪರೀಕ್ಷಾ ಕೇಂದ್ರದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿಗೂ ಮುನ್ನ ಅನುಶ್ರೀ, ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರದ ಬದಲಿಗೆ ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಹೋಗಿದ್ದಳು. ಸುಮಾರು ಹದಿನೈದು ನಿಮಿಷಗಳ ಕಾಲ ಅದೇ ಕೊಠಡಿಯಲ್ಲಿ ಕುಳಿತು, ಪರೀಕ್ಷೆ ಬರೆದಿದ್ದಳು… ಆಮೇಲೆ ಆಗಿದ್ದಲ್ಲವೂ ದುರಂತ!

    ತಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಕೆಂಪರಾಜು ಮತ್ತು ಲಕ್ಷ್ಮಮ್ಮ ದಂಪತಿ ಪುತ್ರಿ ಅನುಶ್ರೀ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ತಿ.ನರಸೀಪುರ ಪಟ್ಟಣದ ವಿದ್ಯೋದಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಳು.

    ಪರೀಕ್ಷೆ ಬರೆಯುವ ಗಡಿಬಿಡಿಯಲ್ಲಿ ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರದ ಬದಲಿಗೆ ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರಕ್ಕೆ ತೆರಳಿ ಆ ಕೊಠಡಿಯಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಕುಳಿತು ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಆದರೆ, ಅನುಶ್ರೀ ಕುಳಿತ್ತಿದ್ದ ಸ್ಥಳ ಬೇರೊಬ್ಬ ವಿದ್ಯಾರ್ಥಿಯದ್ದು ಎಂಬುದನ್ನು ಗಮನಿಸಿದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಆಕೆಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್​ಗೆ ಕರೆದೊಯ್ಯುತ್ತಿದ್ದ ಸಂದರ್ಭ ಮೆಟ್ಟಿಲನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢೀಕರಿಸಿದರು.

    ವಿಷಯ ತಿಳಿದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಡಿಡಿಪಿಐ ರಾಮಚಂದ್ರ ರಾಜೇ ಅರಸ್​, ಸರ್ಕಲ್​ ಇನ್​ಸ್ಪೆಕ್ಟರ್​ ಕೃಷ್ಣಪ್ಪ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತಳ ಕುಟುಂಬಕ್ಕೆ ಶಿಕ್ಷಣ ಸಚಿವ ನಾಗೇಶ್​ ಸೇರಿದಂತೆ ಅಧಿಕಾರಿಗಳು, ಶಿಕ್ಷಕ ವರ್ಗ ಸಾಂತ್ವನ ಹೇಳಿದೆ. ಮಗಳು ಪರೀಕ್ಷೆ ಬರೆಯಲು ಹೋಗಿದ್ದಾಳೆ, ಚೆನ್ನಾಗಿ ಪರೀಕ್ಷೆ ಬರೆದು ಬರುತ್ತಾಳೆ ಎಂದು ಮಗಳಿಗಾಗಿ ಎದುರು ನೋಡುತ್ತಿದ್ದ ಪಾಲಕರಿಗೆ ಆಕೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಹೃದಯಾಘಾತ: ವಿದ್ಯಾರ್ಥಿನಿ ಸಾವು

    SSLC ಪರೀಕ್ಷಾ ಕೇಂದ್ರದಲ್ಲಿ ಸಿಕ್ಕಿಬಿದ್ದ 6 ನಕಲಿ ವಿದ್ಯಾರ್ಥಿಗಳು

    ಸಾವಲ್ಲೂ ಪತ್ನಿಯನ್ನು ಹಿಂಬಾಲಿಸಿದ ಪತಿ: ಮೈಸೂರಿನ ದಂಪತಿಯ ಸ್ಟೋರಿ ಕೇಳಿದ್ರೆ ಕರುಳು ಚುರ್​ ಅನ್ನುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts