ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

murder
Published on

ಮುಂಬೈ: ಏಳು ವರ್ಷಗಳ ಹಿಂದೆ ಪ್ರಿಯತಮೆಯನ್ನೇ ಕೊಂದು ಕೊಚ್ಚಿ ಕೊಚ್ಚಿ ಎಸೆದಿದ್ದ ವ್ಯಕ್ತಿಗೆ ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಅಪರಾಧಿಯಿಂದ 1.1 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು ಅದರಲ್ಲಿ ಒಂದು ಲಕ್ಷ ಹಣವನ್ನು ಸಂತ್ರಸ್ತೆಯ ಮಗನಿಗೆ ನೀಡುವುದಾಗಿ ತಿಳಿಸಲಾಗಿದೆ.

ಮುಂಬೈನಲ್ಲಿ ವಾಸವಿದ್ದ ಕಾಂತಾ ಶೆಟ್ಟಿ ಮತ್ತು ಪ್ರಭಾಕರ್​ ಶೆಟ್ಟಿಗೆ ಅಕ್ರಮ ಸಂಬಂಧವಿತ್ತು. ಇದೀಗ ಕಾಂತಾ ಶೆಟ್ಟಿಯ ಮಗ 16 ವರ್ಷದವನಾಗಿದ್ದಾನೆ. ಆತ 9 ವರ್ಷದನವಾಗಿದ್ದಾಗ ಅಂದರೆ 2013ರ ಅಕ್ಟೋಬರ್​ 20ರಂದು ಕಾಂತಾ ಶೆಟ್ಟಿ, ಪ್ರಭಾಕರನ ಮನೆಗೆ ಹೋಗುವುದಾಗಿ ಮಗನಿಗೆ ತಿಳಿಸಿ ಹೊರಟಿದ್ದಾಳೆ. ಆಕೆ ಸಾಕಿ ನಾಕಾದಲ್ಲಿರುವ ತನ್ನ ನಿವಾಸದಿಂದ ಹೊರಟು ಚೆಂಬೂರಿನಲ್ಲಿದ್ದ ಪ್ರಭಾಕರನ ಸ್ಟಾಫ್ ಕ್ವಾರ್ಟರ್ಸ್​ಗೆ ಪ್ರಯಾಣ ಬೆಳೆಸಿದ್ದಾಳೆ. ಅದಾದ ನಂತರ ಆಕೆ ಮನೆಗೆ ಬಂದಿಲ್ಲ. ಅನುಮಾನ ಬಂದ ಕಾಂತಾಳ ಸಹೋದರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕಾಂತಾ, ಪ್ರಭಾಕರನ ಮನೆಗೆ ಬಂದಿದ್ದಾಗ ಅವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಪ್ರಭಾಕರ್​ ಸಿಟ್ಟಿನಿಂದ ಕಾಂತಾಳ ಗಂಟಲು ಒತ್ತಿ ಸಾಯಿಸಿದ್ದಾನೆ. ನಂತರ ಆಕೆಯನ್ನು ಬಾತ್​ರೂಂಗೆ ಎಳೆದೊಯ್ದು ಅಲ್ಲಿ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ರುಂದ ಮತ್ತು ಕೈ-ಕಾಲು, ಮುಂಡವನ್ನು ಮೂರು ಪ್ರತ್ಯೇಕ ಚೀಲಗಳಲ್ಲಿ ತುಂಬಿ ಮೂರು ಸ್ಥಳದಲ್ಲಿ ಒಗೆದಿದ್ದಾನೆ. ಪ್ರಭಾಕರ್​ ಚೀಲ ಒಗೆಯುವಾಗ ನೋಡಿದ್ದ ಸ್ಥಳೀಯರು ಆತನ ವಿರುದ್ಧ ಸಾಕ್ಷಿ ಹೇಳಿದ್ದಾರೆ. ಕಾಂತಾಳ ಮಗನೂ ಪ್ರಮುಖ ಸಾಕ್ಷಿದಾರನಾಗಿದ್ದು ಇದೀಗ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net