

ಕೊರಟಗೆರೆ: ಆಕೆಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ತನ್ನ ಮನೆಯ ಟ್ರ್ಯಾಕ್ಟರ್ ಚಾಲಕನ ಹೆಲ್ಪರ್ ಕೆಲಸಕ್ಕೆ ಬರುತ್ತಿದ್ದ ಯವಕನೊಂದಿಗೆ ಸಲುಗೆ ಬೆಳೆದಿತ್ತು. ಇವರಿಬ್ಬರ ನಡುವೆ ಅಕ್ರಮ ಸಂಬಂಧವೂ ಬೆಳೆದಿತ್ತಂತೆ. ಕುಟುಂಬಸ್ಥರಿಗೆ ಗೊತ್ತಾಗದಂತೆ ಇಬ್ಬರೂ ಒಟ್ಟಿಗೆ ಸೇರುತ್ತಿದ್ದರಂತೆ. ಇದೀಗ ಇಬ್ಬರೂ ಬುಧವಾರ ದುರಂತ ಅಂತ್ಯಕಂಡಿದ್ದಾರೆ.
ಇಂತಹ ದುರ್ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಿಡಿಪುರ ಬಳಿಯ ಗಿರಚಿಕ್ಕನಹಳ್ಳಿಯಲ್ಲಿ ಸಂಭವಿಸಿದೆ. ವೆಂಕಟಲಕ್ಷ್ಮಮ್ಮ (25) ಮತ್ತು ಆನಂದ್ ಕುಮಾರ್ (27) ಮೃತರು.
ವೆಂಕಟಲಕ್ಷ್ಮಮ್ಮಳ ಗಂಡನ ಟ್ರ್ಯಾಕ್ಟರ್ ಚಾಲಕನ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಆನಂದ್ ಕುಮಾರ್. ಇದೇ ವೇಳೆ ವೆಂಕಟಲಕ್ಷ್ಮಮ್ಮ ಮತ್ತು ಆನಂದ್ ನಡುವೆ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ವಿಚಾರ ಮನೆಯವರು ಹಾಗೂ ಗ್ರಾಮಸ್ಥರಿಗೆ ಗೊತ್ತಾದ ಕೂಡಲೇ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತ ಪ್ರಿಯಕರನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.