ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ನಾನಿದ್ದೀನಿ ಅಂತ ಚೆಕ್​ ಕೊಟ್ಟಿದ್ಯಲ್ಲಪ್ಪಾ.. ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು

'ನಾನಿದ್ದೀನಿ ಧೈರ್ಯವಾಗಿರಿ ಅಂದ್ಯಲ್ಲಪ್ಪಾ’, ಅಪ್ಪು ನೆನೆದು ಡಿ.ಕೆ. ರವಿ ತಾಯಿ ಕಣ್ಣೀರು #Puneeth #DKRavimother - youtube
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ ತಿಂಗಳಾಯ್ತು. ಆದರೆ ಅಭಿಮಾನಿಗಳ ಮನ ಅಪ್ಪುಗಾಗಿ ಮಿಡಿಯುತ್ತಲೇ ಇದೆ. ನಿತ್ಯ ಸಾವಿರಾರು ಮಂದಿ ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ಪೂಜೆ ಮಾಡುತ್ತಾ ಕಣ್ಣೀರು ಸುರಿಸುತ್ತಿದ್ದಾರೆ. ಐಎಎಸ್​ ಅಧಿಕಾರಿ ದಿವಗಂತ ಡಿ.ಕೆ.ರವಿ ಅವರ ತಾಯಿ ಗೌರಮ್ಮ ಕೂಡ ಅಪ್ಪು ಸಮಾಧಿ ಮುಂದೆ ಕಣ್ಣೀರು ಹಾಕುತ್ತಾ, 'ಅಯ್ಯೋ ಪುಣ್ಯಾತ್ಮ ಯಾಕಪ್ಪ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋದೆ? ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ಯಲ್ಲಪ್ಪಾ... ನಾನಿದ್ದೀನಿ ಧೈರ್ಯವಾಗಿರಿ ಅಂದ್ಯಲ್ಲಪ್ಪಾ...' ಎಂದು ರೋದಿಸಿದ್ದಾರೆ.

ಡಿ.ಕೆ.ರವಿ ಅವರು ನೀಧನರಾದಾಗ ಸ್ವತಃ ಅಪ್ಪು ಅವರೇ ಡಿ.ಕೆ. ರವಿ ತಾಯಿ ಗೌರಮ್ಮಗೆ ಧನ ಸಹಾಯ ಮಾಡಿದ್ದರು. ಇದನ್ನು ನೆನೆದು ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು ಹಾಕಿದ್ದಾರೆ. 'ನನ್ನ ಮಗ ಸತ್ತಾಗ ನಮ್ಮನ್ನು ಸಿದ್ಧಗಂಗಾ ಮಠಕ್ಕೆ ಕರೆಸಿಕೊಂಡು ಪುನೀತ್​ ರಾಜ್​ಕುಮಾರ್​ ಸಂತೈಸಿದ್ದರು. ನನ್ನ ಮತ್ತು ನನ್ನ ಗಂಡನ್ನು ತಬ್ಬಿಕೊಂಡು ಧೈರ್ಯವಾಗಿರಿ. ಏನೇ ಸಹಾಯ ಬೇಕಿದ್ದರೂ ಬನ್ನಿ ನಾನು ಮಾಡುವೆ ಎನ್ನುತ್ತಾ ಅಂದು 50 ಸಾವಿರ ರೂಪಾಯಿಯ ಚೆಕ್​ ಕೊಟ್ಟಿದ್ದರು' ಎಂದು ಭಾವುಕರಾದರು. 'ಜಿಲ್ಲಾಧಿಕಾರಿ ಪಾತ್ರ ಮಾಡಬೇಕು ಎಂದು ಅಪ್ಪು ಅವರಿಗೆ ಆಸೆ ಇತ್ತು. ಈ ಹಿಂದೆ ಅಪ್ಪು ಕೋಲಾರಕ್ಕೆ ಬಂದು ನನ್ನ ಮಗನ ಜತೆ ಮಾತನಾಡಿದ್ದರು' ಎಂದು ಸ್ಮರಿಸಿಕೊಂಡರು. 'ಪುನೀತ್​ ತೀರಿಕೊಂಡಾಗ ನನ್ನ ಆರೋಗ್ಯ ಸರಿ ಇರಲಿಲ್ಲ. ಸರಿ ಇದ್ದಿದ್ದರೆ ಅಂದೇ ಬಂದು ಅಂತಿಮ ದರ್ಶನ ಪಡೆಯುತ್ತಿದೆ...' ಕಣ್ಣೀರಿಟ್ಟ ಗೌರಮ್ಮ, 'ಅಂದು ಆ ಪುಣ್ಯಾತ್ಮನ ಕೊನೇ ದರ್ಶನ ಪಡೆಯೋಕಂತೂ ಆಗಲಿಲ್ಲ, ಅದಕ್ಕೆ ಸಮಾಧಿ ನೋಡೋಕೆ ಬಂದಿದ್ದೀನಿ' ಎನ್ನುತ್ತಲೇ ಗದ್ಗದಿತರಾದರು.

ಅಪ್ಪು ಸಮಾಧಿ ಬಳಿ ಡಿಕೆ ರವಿ ತಾಯಿ ಗೌರಮ್ಮ ಕಣ್ಣೀರು.
ಅಪ್ಪು ಸಮಾಧಿ ಬಳಿ ಡಿಕೆ ರವಿ ತಾಯಿ ಗೌರಮ್ಮ ಕಣ್ಣೀರು.

ಸಿನಿಮಾ, ಅಭಿನಯ, ಸಾಮಾಜಿಕ ಕಾರ್ಯದಲ್ಲೂ ತನ್ನದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದ ಅಪ್ಪು, ಬಡ ಹೆಣ್ಣು ಮಕ್ಕಳ ಶಿಕ್ಷಣ, ನೊಂದವರಿಗೆ ಸಾಂತ್ವನ, ಕಷ್ಟದಲ್ಲಿದ್ದವರಿಗೆ ಧನ ಸಹಾಯ ಮಾಡಿ ಅವರ ಬದುಕಿಗೆ ಚೈತನ್ಯ ತುಂಬುತ್ತಿದ್ದರು. ನಗುಮುಖ, ಸರಳ ವ್ಯಕ್ತಿತ್ವ, ಸಮಾಜಮುಖಿ ಕೆಲಸದಿಂದಲೇ ಕನ್ನಡಿಗರ ಮನದಲ್ಲಿ ರಾಜಕುಮಾರನಾಗಿ ಮೆರೆದ ಪುನೀತ್​ ರಾಜ್​ಕುಮಾರ್​, ಎಂದೆಂದಿಗೂ ಅಜರಾಮರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net