More

    ‘ಹೇಗೆ ಮರಿಯಾಲಿ ಪುನೀತರಾಜು ನಿನ್ನ.. ಹೇಗೆ ಬಂತಪ್ಪ ನಿನಗೆ ಸಾವು?’ ಕಣ್ಣೀರು ತರಿಸುತ್ತೆ ತಾಯಂದಿರ ಸೋಬಾನೆ ಪದ

    ಚಾಮರಾಜನಗರ: ನಟ ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿ ಗಾಯದಂತೆಯೇ ಇದೆ. ಅಪ್ಪು ಕುರಿತು ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಮನದಲ್ಲಿ ಮೂಡಿದ ಭಾವವನ್ನ ಅಕ್ಷರಕ್ಕಿಳಿಸಿದ್ದಾರೆ. ಹಲವರು ಸಾಹಿತ್ಯ ರಚಿಸಿ ಹಾಡುವ ಮೂಲಕ ನಮನಿಸಿದ್ದಾರೆ. ಅವರ ಹೆಸರಲ್ಲಿ ನಿತ್ಯ ಒಂದಿಲ್ಲೊಂದು ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇದೀಗ ಪುನೀತ್ ರಾಜಕುಮಾರ್ ಅವರು ಸೋಬಾನೆ ಪದ ಹಾಡುಗರ ಬಾಯಲ್ಲೂ ಹಾಡಾಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಅಪ್ಪು ಅಜರಾಮರ ಎಂಬುದಕ್ಕೆ ಇದು ಮತ್ತೊಂದು ಸೇರ್ಪಡೆ.

    ಹೇಗೆ ಮರಿಯಾಲಿ ಪುನೀತರಾಜು ನಿನ್ನ, ಮರೆಸಿ ಮಣ್ಣಿನೊಳಗೆ
    ಹೇಗೆ ಬಂತಪ್ಪ ನಿನಗೆ ಸಾವು
    ಹುಟ್ಟಿ ಬೆಳೆದಿದ್ದು ಎಲ್ಲೋ.. ಸಾವು ಬಂದಿದ್ದು ಅಲ್ಲೋ.. ಬೆಂಗಳೂರಿನಲ್ಲಿತ್ತಾ ಸಾವು?
    ಹೇಗೆ ಮರಿಯಾಲಿ… ಹೇಗೆ ಮರಿಯಾಲಿ ಪುನೀತರಾಜು ನಿನ್ನ…
    ಎಂದು ಚಾಮರಾಜನಗರ ರಾಮಸಮುದ್ರದ ಸಾವಿತ್ರಮ್ಮ, ಮಣೆಯಮ್ಮ ಅವರ ತಂಡ ಪುನೀತ್ ಸಾವಿನ ಬಗ್ಗೆ ನೋವಿನಿಂದಲೇ ಹಾಡಿದ್ದಾರೆ. ಸಾವಿತ್ರಮ್ಮ, ಮಣೆಯಮ್ಮ ಅನಕ್ಷರಸ್ಥರಾದರೂ ಪುನೀತ್ ರಾಜಕುಮಾರ್ ಮೇಲಿನ ಅಭಿಮಾನದಿಂದ ಸೋಬಾನೆ ಪದ ಕಟ್ಟಿ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದಾರೆ.

    ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

    ನಟ ಪುನೀತ್​ಗಾಗಿ 500 ಕಿ.ಮೀ. ದೂರದಿಂದ ಓಟದ ಮೂಲಕವೇ ಬೆಂಗಳೂರಿಗೆ ಆಗಮಿಸುತ್ತಿದ್ದಾಳೆ 3 ಮಕ್ಕಳ ತಾಯಿ!

    ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

    ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts