More

  ಎನ್‌ಐಟಿಕೆ- ಗೇಲ್ ದೇಶೀಯ ಪೈಪ್ಡ್ ನ್ಯಾಚುರಲ್ ಗ್ಯಾಸ್ ಒಪ್ಪಂದಕ್ಕೆ ಸಹಿ

  ಮಂಗಳೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಇಲ್ಲಿನ ಬೋಧಕ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ಕೊಳವೆ ಮೂಲಕ ಅನಿಲ ಪೂರೈಸಲು ಗೇಲ್ (ಇಂಡಿಯಾ) ಲಿಮಿಟೆಡ್ ಜತೆ ಬೃಹತ್ ದೇಶೀಯ ಪೈಪ್ಡ್ ನ್ಯಾಚುರಲ್ ಗ್ಯಾಸ್ ಒಪ್ಪಂದಕ್ಕೆ ಸಹಿ ಹಾಕಿದೆ.

  ಇತ್ತೀಚೆಗೆ ಸುರತ್ಕಲ್‌ನ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಈ ಎರಡೂ ಸಂಸ್ಥೆಗಳ ಅಧಿಕಾರಿಗಳ ಮುಂದಾಲುತ್ವದಲ್ಲಿ ಸಹಿ ಹಾಕಲಾಗಿದೆ.

  ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಜಿಎಂಪಿಎಲ್) ಸಿಇಒ ಸುಧೀರ್ ಕುಮಾರ್ ದೀಕ್ಷಿತ್ ಹಾಗೂ ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ, ಮಂಗಳೂರಿನ ಗೇಲ್ ಗ್ಯಾಸ್ ಜಿಎಂ (ಸಿಜಿಡಿ) ಸಾಯಿ ಶಂಕರ್ ಬಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

  ಎನ್‌ಐಟಿಕೆ ಸುರತ್ಕಲ್‌ನ ಎಲ್ಲಾ ವಸತಿ ಗೃಹಗಳನ್ನು ಪಿಎನ್‌ಜಿಯ ಸ್ಮಾರ್ಟ್ ಇಂಧನದೊಂದಿಗೆ ಸಂಪರ್ಕಿಸಲು ಗೇಲ್‌ಗ್ಯಾಸ್‌ಗೆ ಅನುವು ಮಾಡಿಕೊಡುತ್ತದೆ, ಮತ್ತು ಎನ್‌ಐಟಿಕೆ ಮತ್ತು ಗೇಲ್ ನಡುವಿನ ದೀರ್ಘಕಾಲದ ಸಂಬಂಧವನ್ನು ಈ ಒಪ್ಪಂದ ಮತ್ತಷ್ಟು ವಿಸ್ತರಿಸಿದೆ.

  ಎನ್‌ಐಟಿಕೆ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಪ್ರೊ.ಕೆ.ವಿ.ಗಂಗಾಧರನ್, ರಿಸರ್ಚ್ ಕನ್ಸಲ್ಟೆನ್ಸಿ ಡೀನ್ ಪ್ರೊ. ಉದಯ ಭಟ್ ಕೆ, ಅಕಾಡೆಮಿಕ್ ಡೀನ್ ಪ್ರೊ.ದ್ವಾರಕೇಶ್, ಹಳೆಯ ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಶ್ರೀಕಾಂತ ಎಸ್. ರಾವ್, ಜಂಟಿ ರಿಜಿಸ್ಟಾರ್ ರಾಮ್ ಮೋಹನ್ ವೈ, ಧಮೇರ್ಂದ್ರ ಕುಮಾರ್, ಹಿರಿಯ ವ್ಯವಸ್ಥಾಪಕ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts