ಕೊಲ್ಹಾರದ ಉಷ್ಣವಿದ್ಯುತ್ ಸ್ಥಾವರದಲ್ಲಿ 20 ಮಂದಿಗೆ ಕರೊನಾ ಸೋಂಕು

Corona
Published on

ವಿಜಯಪುರ: ಕೊಲ್ಹಾರ ತಾಲೂಕಿನ ಉಷ್ಣವಿದ್ಯುತ್ ಸ್ಥಾವರದಲ್ಲಿ 20 ಮಂದಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದ್ದು, ಆತಂಕ ಸೃಷ್ಟಿಸಿದೆ.

ಮೊದಲು NTPC ಸಿಬ್ಬಂದಿಯ ಕುಟುಂಬದ ನಾಲ್ವರಿಗೆ ಕರೊನಾ ಸೋಂಕು ತಗುಲಿತ್ತು. ಈ ನಾಲ್ವರೂ ಇತ್ತೀಚಿಗೆ ಮುಂಬೈಗೆ ಹೋಗಿ ಬಂದಿದ್ದರು. ಬಳಿಕ ಸಿಬ್ಬಂದಿ ಸೇರಿ ವಸತಿ ಗೃಹದ ಒಂದೇ ಬ್ಲಾಕ್‌ನ 20 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ಈ ಬ್ಲಾಕ್‌ ಅನ್ನು ಕಂಟೋನ್ಮೆಂಟ್ ಜೋನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ಕರೊನಾ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳಲು NTPC ಆರೋಗ್ಯ ಸಿಬ್ಬಂದಿ ಜತೆಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೂ ಸಂಪರ್ಕದಲ್ಲಿದ್ದಾರೆ. NTPC ಸ್ಥಾವರದಲ್ಲಿ ವಾಸವಿರುವ ಜನರಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net