More

    ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್​ ಪಡೆಯುವ ಮುನ್ನ ಎಚ್ಚರ! ನಕಲಿ ಟಿಕೆಟ್​ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ಟಿಟಿಡಿ ಸಿಬ್ಬಂದಿ

    ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಚಾತಕಪಕ್ಷಿಗಳಂತೆ ಕಾಯುತ್ತಾರೆ. ಇದೊಂದು ಸಲ ದರ್ಶನದ ಟಿಕೆಟ್​ ಬುಕಿಂಗ್​ ಆದ್ರೆ ಸಾಕಪ್ಪ ಎಂದು ಮನದಲ್ಲೇ ದೇವರನ್ನ ನೆನೆದು ಟಿಕೆಟ್​ ಪಡೆಯಲು ಯತ್ನಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ವಿಶೇಷ ದರ್ಶನದ ನಕಲಿ ಟಿಕೆಟ್​ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಜಾಲ ಪತ್ತೆಯಾಗಿದೆ.

    ವಿಶೇಷ ದರ್ಶನದ ನಕಲಿ ಟಿಕೆಟ್​ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ತಿರುಮಲ ಪೊಲೀಸ್​ ಠಾಣೆಯಲ್ಲಿ 7 ಜನರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ತೆಲಂಗಾಣದಿಂದ ಬಂದಿದ್ದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್​ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್​ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.

    ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್​ ಪಡೆಯುವ ಮುನ್ನ ಎಚ್ಚರ! ನಕಲಿ ಟಿಕೆಟ್​ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ಟಿಟಿಡಿ ಸಿಬ್ಬಂದಿ

    ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್​ ಅನ್ನು ತಲಾ 7 ಸಾವಿರ ರೂ.ಗೆ ಖರೀದಿಸಿದ್ದರು. ಅದು ಕೂಡ ನಕಲಿ ಎಂದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಟಿಟಿಡಿ ಅಧಿಕಾರಿಗಳು ತಿರುಮಲ 1 ಟೌನ್​ ಪೊಲೀಸ್​ ಠಾಣೆಯಲ್ಲಿ ಬಾಲಾಜಿ (ಮಧ್ಯವರ್ತಿ), ಅರುಣ್​ (ಲಡ್ಡು ಮಾರಾಟ ಕೌಂಟರ್​ನ ಉದ್ಯೋಗಿ), ಎ.ಕೃಷ್ಣರಾವ್​ (ಎಸ್​ಪಿಎಫ್​​ ಕಾನ್​ಸ್ಟೆಬಲ್​), ನಾಗೇಂದ್ರ (ತ್ರಿಲೋಕ್​ ಏಜೆನ್ಸಿ ಟಿಕೆಟ್​ ಮಾರಾಟ ಕೌಂಟರ್​ನ ಮಾಜಿ ಉದ್ಯೋಗಿ) ವಿರುದ್ಧ ದೂರು ದಾಖಲಿಸಿದ್ದಾರೆ.

    ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ 2 ಟೌನ್​ ಪೊಲೀಸ್​ ಠಾಣೆಯಲ್ಲಿ ಚೆಂಗರೆಡ್ಡಿ (ಮಧ್ಯವರ್ತಿ), ಜೆ. ದೇವೇಂದ್ರ ಪ್ರಸಾದ್​ ಮತ್ತು ಇ. ವೆಂಕಟ್​ (ತ್ರಿಲೋಕ್​ ಏಜೆನ್ಸಿ ಟಿಕೆಟ್​ ಮಾರಾಟ ಕೌಂಟರ್​ನ ಮಾಜಿ ಉದ್ಯೋಗಿಗಳು) ವಿರುದ್ಧ ದೂರು ದಾಖಲಿಸಲಾಗಿದೆ.

    ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಹುಬ್ಬೇರಿಸಿದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts