ಕಾಶ್ಮೀರದಲ್ಲೂ ಕಾಳಿ ಮಠದ ಶಾಖೆ ಸ್ಥಾಪಿಸುವೆ: ಶ್ರೀ ಋಷಿಕುಮಾರ ಸ್ವಾಮೀಜಿ

kali math
Published on

ಹಾಸನ: ಅವಕಾಶ ಸಿಕ್ಕರೆ ಮುಂದೆ ಕಾಶ್ಮೀರದಲ್ಲೂ ಕಾಳಿ ಮಠದ ಶಾಖಾ ಮಠ ಸ್ಥಾಪಿಸುತ್ತೇನೆ ಎಂದ ಅರಸೀಕೆರೆಯ ಕಾಳಿ ಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಳಿ ಮಠದ ಸ್ವಾಮೀಜಿ, ಖಾವಿ ತೊಟ್ಟಿರುವ ನಾನು ಅಗತ್ಯ ಬಿದ್ದರೆ ಕರೆ ನೀಡುವುದಷ್ಟೇ ಅಲ್ಲ, ಆತ್ಮರಕ್ಷಣೆಗಾಗಿ ತಲೆ ತೆಗೆಯಲೂ ನಾನೇ ಸಿದ್ಧ ಎಂದರು. ಶಿವಮೊಗ್ಗದ ಹರ್ಷನ ಹತ್ಯೆಯಾದ ವೇಳೆ ಒಂದು ತಲೆಗೆ 10 ತಲೆ ತೆಗೆಯಬೇಕು ಅಂದಿದ್ದು ನಿಜ. ನಮ್ಮ ಮನೆಯ ಮಗ ಹರ್ಷ. ಆತನ ನೋವು ಕಾಡುತ್ತಿದೆ. ಅಗತ್ಯಬಿದ್ದಾಗ ಆತ್ಮರಕ್ಷಣೆಗಾಗಿ ನಾನು ತಲೆ ತೆಗೆಯೋಕೆ ಸಿದ್ಧ. ಕಾವಿ ಹಾಕಿದ ಮಾತ್ರಕ್ಕೆ ಸುಮ್ಮನಿರಬೇಕು ಎಂದೇನಿಲ್ಲ. ಹಿಂದೆ ಪರಶುರಾಮ, ವಶಿಷ್ಠರಂತಹ ಮುನಿಗಳು ಇದ್ದರು. ಧರ್ಮಕ್ಕೆ ಅಪಾಯ ಬಂದಾಗ ಸುಮ್ಮನೆ ನೋಡಿಕೊಂಡು ಇರೋಕೆ ಆಗಲ್ಲ. ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲೂ ಕಾಶ್ಮೀರದಂತಹ ವಾತಾವರಣ ಸೃಷ್ಟಿಯಾಗಿದೆ. ಕಾಶ್ಮೀರಿ ಫೈಲ್​ ಸಿನಿಮಾವನ್ನ ಎಲ್ಲರೂ ನೋಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net