ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೋವಿಡ್​ಗೆ ಬಲಿ

journalist jayateertha
Published on

ಕಲಬುರಗಿ: ಮಹಾಮಾರಿ ಕರೊನಾ ಸೋಂಕು ಪತ್ರಕರ್ತರನ್ನೂ ಬೆಂಬಿಡದೆ ಕಾಡುತ್ತಿದೆ. ಇದೀಗ ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ (53) ಅವರನ್ನೂ ಬಲಿ ಪಡೆದಿದೆ. ಒಂದು ವಾರದ ಹಿಂದೆ ಜಯರ್ತೀಥಗೆ ಕರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು(ಗುರುವಾರ) ಕೊನೆಯುಸಿರೆಳೆದರು.

ಜಯತೀರ್ಥ ಕಾಗಲಕರ್ ಅವರು ಮೂರು ದಶಕದಿಂದ ಸಂಯುಕ್ತ ಕರ್ನಾಟಕದ ವರದಿಗಾರರಾಗಿ, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತ ಇತ್ತೀಚಿಗೆ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಬಡ್ತಿ ಹೊಂದಿದ್ದರು. ಮೂರು ದಶಕಗಳಿಂದ ಹಲವು ಜನಪರ ವರದಿಗಳ ಕಾಗಲಕರ್ ಅವರು ಸರ್ಕಾರದ ಗಮನ ಸೆಳೆದಿದ್ದರು. ಇವರ ಅಗಲಿಕೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಂಪಾತ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net