ಬೇಡ ಅಂದ್ರೂ ಸೆಕ್ಸ್​ ಮಾಡಿದ, ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನೂ ಕೊಂದ... ಕೊನೆಗೆ ಯುವತಿ ಕೊಟ್ಲು ಬಿಗ್​ ಶಾಕ್​!

Sexual assault, love cheating
Published on

ಮಂಗಳೂರು: ಮದುವೆ ಆಗ್ತೀನಿ ಎಂದು ಯುವತಿಯೊಬ್ಬಳಿಗೆ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನೂ ಕೊಲ್ಲಿಸಿ, ಎಲ್ಲವೂ ಮುಗಿದ ಬಳಿಕ ವರಸೆ ಬದಲಿಸಿದ್ದ. ಎಲ್ಲವನ್ನೂ ಸಹಿಸಿಕೊಂಡಿದ್ದ ಯುವತಿ, ಇದೀಗ ವಂಚಕನಿಗೆ ಬಿಗ್​ ಶಾಕ್​ ಕೊಟ್ಟಿದ್ದಾಳೆ.

ಅರುಣ್ ರಾಜ್ ಕಾಪಿಕಾಡ್(39) ಎಂಬಾತ 2020ರ ಡಿಸೆಂಬರ್​ನಲ್ಲಿ ನಗರದ ಹೋಟೆಲೊಂದಕ್ಕೆ ಯುವತಿಯನ್ನು ಕರೆದೊಯ್ದು, ಆಕೆಗೆ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕ ಸಂಪರ್ಕ ನಡೆಸಿದ್ದ. ಬಳಿಕ ಮದುವೆ ಆಗುತ್ತೇನೆ, ಈ ವಿಚಾರ ಯಾರಲ್ಲೂ ಹೇಳಬೇಡ ಎಂದು ನಂಬಿಸಿದ್ದ, ಇದಾದ ಬಳಿಕ ಪದೇಪದೆ ಮದುವೆಯಾಗುವ ಭರವಸೆ ನೀಡಿ ತನ್ನ ಫ್ಲ್ಯಾಟ್​ಗೂ ಯುವತಿಯನ್ನ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿ ಗರ್ಭಿಣಿಯಾದ ವಿಷಯ ತಿಳಿದು ಬಲವಂತವಾಗಿ ಆಕೆಗೆ ಗರ್ಭಪಾತ ಮಾಡಿಸಿದ್ದ. ಇದೀಗ ಯುವತಿಯನ್ನು ಮದುವೆ ಆಗದೆ ವಂಚಿಸಿದ್ದಾನೆ. ಹೀಗಂತ ಸಂತ್ರಸ್ತ ಯುವತಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net