

ಚಿಕ್ಕಮಗಳೂರು: ಮಹಾಮಾರಿ ಕರೊನಾ ಸೋಂಕಿನ ಭಯಕ್ಕೆ ಹಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ದುರಾದೃಷ್ಟಕರ. ತನ್ನ ಪ್ರೀತಿ ಪಾತ್ರರರು ಕೋವಿಡ್ಗೆ ಬಲಿಯಾದ ಇಲ್ಲವೇ ಅವರಿಗೆ ಸೋಂಕು ತಗುಲಿದೆ ಎಂಬ ಸುದ್ದಿ ಕೇಳಿಯೇ ಹಲವರಿಗೆ ಹೃದಯಾಘಾತ ಆಗುತ್ತಿದೆ. ಇಂತಹದ್ದೇ ಘಟನೆ ಕಾಫಿನಾಡಲ್ಲೂ ಸಂಭವಿಸಿದ್ದು, ಪೊಲೀಸ್ ದಂಪತಿ ಬದುಕಿಗೆ ಕರೊನಾ ಕೊಳ್ಳಿ ಇಟ್ಟಿದೆ.
ನಿವೃತ್ತ ಎಎಸ್ಐ ಬಸವರಾಜ್(68) ಅವರ ಪತ್ನಿ ಜಯಮ್ಮ(60)ಗೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿದ ಬಸವರಾಜ್ಗೆ ಹೃದಯಾಘಾತವಾಗಿತ್ತು. ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ. ಕರೊನಾ ಸೋಂಕಿನಿಂದ ಪತ್ನಿ ಮೃತಪಟ್ಟರೆ, ಅತ್ತ ಹೃದಯಾಘಾತದಿಂದ ಪತಿ ಕೊನೆಯುಸಿರೆಳೆದರು. ಪತಿ-ಪತಿ ಇಬ್ಬರೂ ಸಾವಲ್ಲೂ ಒಂದಾಗಿದ್ದಾರೆ.