ಒಂದೇ ಶಾಲೆಗೆ ಶಿಕ್ಷಕರಾಗಿದ್ದ ಅಣ್ಣ-ತಮ್ಮ ಇಬ್ಬರೂ ಕರೊನಾಗೆ ಬಲಿ! ಮನಕಲಕುತ್ತೆ ಕುಟುಂಬಸ್ಥರ ಆಕ್ರಂದನ

corona death
Published on

ಬೆಳಗಾವಿ: ಮಹಾಮಾರಿ ಕರೊನಾ ಶಿಕ್ಷಕರನ್ನೂ ಬೆಂಬಿಡದೆ ಕಾಡುತ್ತಿದ್ದು, ರಾಜ್ಯದಲ್ಲಿ ನೂರಾರು ಶಿಕ್ಷಕರನ್ನು ಬಲಿ ಪಡೆದಿದೆ. ಸಾವಿನ ಸರಣಿ ಮುಂದುವರಿದಿದ್ದು, ಬೆಳಗಾವಿಯಲ್ಲೂ ಒಂದೇ ಮನೆಯ ಶಿಕ್ಷಕ ಸಹೋದರರಿಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಪಿನಕಟ್ಟಿಯ ಪಿ.ಕೆ. ಕುಂಬಾರ್ ಮತ್ತು ನಾರಾಯಣ್ ಕೆ. ಕುಂಬಾರ ಮೃತ ಸಹೋದರರು. ಇವರಿಬ್ಬರೂ ತೋಪಿನಕಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಹತ್ತು ದಿನಗಳ ಹಿಂದೆ ತಮ್ಮ ನಾರಾಯಣ್​ಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ‌ ಅಣ್ಣ ಪಿ.ಕೆ.ಕುಂಬಾರ್​ಗೂ ಸೋಂಕು ತಗುಲಿ ಇಬ್ಬರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಲ್ಕು ದಿನದ ಹಿಂದೆ ಪಿ.ಕೆ‌ ಕುಂಬಾರ್ ಮೃತಪಟ್ಟಿದ್ದು, ಇದಾದ ಎರಡು ದಿನಕ್ಕೆ ನಾರಾಯಣ್ ಕುಂಬಾರ್ ಕರೊನಾಗೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಹೋದರರಿಬ್ಬರನ್ನೂ ಕಳೆದುಕೊಂಡ ಕುಟುಂಬ ಅನಾಥವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net