ಜಾತ್ರೆಗೆ ತೆರಳುತ್ತಿದ್ದ ಹುಡುಗಿಗೆ ಬೆಂಕಿ ತಗುಲಿ ಸಾವು; ಇನ್ನಿಬ್ಬರಿಗೆ ಗಾಯ

Fire
Published on

ತುಮಕೂರು: ಜಾತ್ರೆಯೊಂದಕ್ಕೆ ತೆರಳುತ್ತಿದ್ದ ಹುಡುಗಿಗೆ ಬೆಟ್ಟದ ಪ್ರದೇಶದಲ್ಲಿ ಬೆಂಕಿ ತಗುಲಿ ಸಾವಿಗೀಡಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ಈ ಅವಘಡ ನಡೆದಿದೆ.

ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿ ಮಾನಸ (15) ಸಾವಿಗೀಡಾದ ಬಾಲಕಿ. ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಉರಿಯುತ್ತಿದ್ದ ಬೆಂಕಿ ಆಕಸ್ಮಿಕವಾಗಿ ತಗಲಿ ತೀವ್ರ ಗಾಯಗೊಂಡಿದ್ದ ಈಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗ್ಯೂ ಬದುಕಿಸಿಕೊಳ್ಳಲು ಆಗಿರಲಿಲ್ಲ.

ಇನ್ನಿಬ್ಬರಿಗೂ ಬೆಂಕಿ ತಗುಲಿ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net