ನಾನು ಭಾವನನ್ನು ಕಳೆದುಕೊಂಡೆ, ಒಂದೇ ದಿನ 6 ಸಾವು ನೋಡ್ದೆ... ಕರೊನಾ ವಾಸ್ತವ ಬೇರೆಯೇ ಇದೆ...

pavan kumar
Published on

ಬೆಂಗಳೂರು: ಕರೊನಾ ಬಗ್ಗೆ ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಕರೊನಾಗೆ ನನ್ನ ಭಾವ ಮತ್ತು ಅವರ ತಂದೆ ಬಲಿಯಾದರು. ಒಂದೇ ದಿನ ನನ್ನ ಕಣ್ಣಾರೆ 6 ಸಾವು ನೋಡಿದೆ. ದಯವಿಟ್ಟು ನಾನು ಹೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳಿ. ವಾಸ್ತವ ಬೇರೆಯೇ ಇದೆ. ಇದಕ್ಕೆ ನಾನು ಹಾಗೂ ನನ್ನ ಕುಟುಂಬವೇ ಸಾಕ್ಷಿ... ಎಂದು ಕಿರುತೆರೆ ನಟ ಪವನ್ ಕುಮಾರ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಫೇಸ್​ಬುಕ್​ನಲ್ಲಿ ವಿಡಿಯೋ ಹಾಕಿರುವ ಗಟ್ಟಿಮೇಳ ಧಾರಾವಾಹಿ ನಟ ಪವನ್​, ಆಸ್ಪತ್ರೆಗೆ ಹೋದ್ರೆ ಅಲ್ಲಿ ಏನಾಗ್ತಿದೆ? ಇಷ್ಟೊಂದು ಜನರು ಸಾಯುತ್ತಿರುವುದು ನಿಜಾನಾ? ಸ್ಮಶಾನದಲ್ಲಿ ಯಾಕೆ ಹೆಣಗಳನ್ನು ಸುಡಲು ಸರದಿ ನಿಲ್ಲಬೇಕು ಅನ್ನೋ ಬಗ್ಗೆ ಹೇಳುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಅದು ಕೊಟ್ಟಿದ್ದೀವಿ, ಇದು ಕೊಟ್ಟಿದ್ದೀವಿ ಅಂತಿದೆ. ಆದ್ರೆ ತಾಯಿ ಗರ್ಭದಿಂದ ಮಗು ಹೊರ ಬರುತ್ತಿದ್ದಂತೆ ಆ ಮಗುಗೆ ಹಾಲು ಕುಡಿಯೋಕು ಮೊದಲು ಆಕ್ಸಿಜನ್​ ತೆಗೆದುಕೊಳ್ಳುಂತೆ. ಅಂತಹ ಆಕ್ಸಿಜನ್​ ಅನ್ನೇ ಸರ್ಕಾರ ಸಮರ್ಪಕವಾಗಿ ಕೊಡ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿರಿ ಕಾಂಗ್ರೆಸ್​ ಶಾಸಕಿ ಕಲಾವತಿ ಕರೊನಾಗೆ ಬಲಿ

ಕಳೆದ ವರ್ಷದಂತೆ ಈ ವರ್ಷ ಕರೊನಾ ಇಲ್ಲ, ಈ ಬಾರಿ ತುಂಬ ಕೆಟ್ಟದ್ದಾಗಿದೆ. ಸೋಂಕಿನ ಬಗ್ಗೆ ಹೆದರಬೇಡಿ ಅಂತ ಹೇಳ್ತಾರಲ್ಲ ಅದನ್ನು ಕೇಳಬೇಡಿ. ಜನರಿಗೆ ಧೈರ್ಯ ಬರಲಿ ಅಂತ ಹೇಳ್ತಾರೆ ಅಷ್ಟೆ. ಅದು ಭಂಡ ಧೈರ್ಯ ಬಂದು ಅವರೆಲ್ಲ ಆರಾಮಾಗಿ ಓಡಾಡ್ತಾರೆ. ಇನ್ನೊಂದಿಷ್ಟು ಜನರು ಕರೊನಾ ಅಂಟಿಸಿಕೊಳ್ಳುವುದಲ್ಲದೆ ಬೇರೆಯವರಿಗೂ ಅಂಟಿಸುತ್ತಾರೆ ಎಂದು ಪವನ್ ಕುಮಾರ್ ಎಚ್ಚರಿಸಿದ್ದಾರೆ.

ಪವನ್ ಕುಮಾರ್ ಕಿನ್ನರಿ, ಗಟ್ಟಿಮೇಳ, ಆಕೃತಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕರೊನಾ ವೈರಸ್‌ನಿಂದಾಗಿ ಇವರ ಭಾವ ಹಾಗೂ ಭಾವನ ತಂದೆಯನ್ನು ಎರಡು ದಿನದ ಅಂತರದಲ್ಲಿ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net