More

    VIDEO| ಜನರೇ ನನ್ನನ್ನು ಬೆದರಿಸ್ತಾರೆ, ನಾನೇನು ಮಾಡಲಿ… ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಶ್ರೀರಾಮುಲು

    ಬಳ್ಳಾರಿ: ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಾನು ಹೋದಲೆಲ್ಲಾ ಐದಕ್ಕಿಂತ ಹೆಚ್ಚು ಜನ ಬರಬೇಡಿ ಎಂದು ಹೇಳುತ್ತೇನೆ. ಆದರೂ ಜನರು ಕೇಳುತ್ತಿಲ್ಲ. ಮಾಸ್ಕ್ ಹಾಕಿಕೊಳ್ಳಲು ಹೋದರೆ ಸೆಲ್ಫಿ ತೆಗೆದುಕೊಳ್ಳಬೇಕು. ಮಾಸ್ಕ್ ತೆಗೀರಿ ಎಂದು ಜನರೇ ನನ್ನನ್ನು ಬೆದರಿಸುತ್ತಾರೆ, ನಾನು ಏನು ಮಾಡಲಿ? ಎಂದು ಸಚಿವ ಬಿ.ಶ್ರೀರಾಮುಲು ಅಳಲು ತೋಡಿಕೊಂಡಿದ್ದಾರೆ.

    ನಾನು ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಅದಕ್ಕಾಗಿ ಪ್ರಚಾರ ಕೈಗೊಂಡಿರುವೆ. ಆದರೆ, ಜನಗಳೇ ನುಗ್ಗಿ-ನುಗ್ಗಿ ಬರ್ತಿದ್ದಾರೆ. ನಾನು ಎಷ್ಟು ತಡೆಯಲು ಪ್ರಯತ್ನ ಪಟ್ಟರೂ ಜನ ಬರ್ತಿದ್ದಾರೆ. ದಯವಿಟ್ಟು ಹಂಗೆ ಮಾಡ್ಬೇಡಿ ಅಂದ್ರೂ ಕೇಳಲ್ಲ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ ಎಂದು ಸುದ್ದಿಗಾರರಿಗೆ ಶ್ರೀರಾಮುಲು ಸಮಾಜಾಯಿಷಿ ನೀಡಿದರು.

    ಕರೊನಾ ಸಂಕಷ್ಟಕ್ಕೆ ಜನ ನಲುಗಿದ್ದಾರೆ. ಮಾಸ್ಕ್​ ಧರಿಸುವಿಕೆ ಕಡ್ಡಾಯ ಎಂದು ಸರ್ಕಾರ ರೂಲ್ಸ್​ ಮಾಡಿದ್ದರೂ ಸಚಿವ ಶ್ರೀರಾಮುಲು ಮಾತ್ರ ಶುಕ್ರವಾರ ಬೆಳಗ್ಗೆ ಮಾಸ್ಕ್​ ಧರಿಸದೆ ಬಳ್ಳಾರಿ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಕರೊನಾ ಆತಂಕದ ನಡುವೆಯೂ ಜನಜಂಗುಳಿಯಲ್ಲಿ ಸಚಿವರು ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು. ಬಳಿಕ ಸಮಜಾಯಿಷಿ ಕೊಟ್ಟ ಸಚಿವರು, ಸೆಲ್ಫಿ ತೆಗೆದುಕೊಳ್ಳಬೇಕು ಮಾಸ್ಕ್ ತೆಗೀರಿ ಎಂದು ಜನರೇ ನನ್ನನ್ನು ಬೆದರಿಸುತ್ತಾರೆ, ನಾನು ಏನು ಮಾಡಲಿ ಎಂದರು.

     

    ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

    ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆ, ಗಂಡನ ಆ ಕಿರುಕುಳಕ್ಕೆ ಬಲಿಯಾದಳೇ ಪತ್ನಿ

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts