7 ಗ್ರಾಮಗಳು ಮುಳುಗಡೆ: ಜನರನ್ನು ಸ್ಥಳಾಂತರಿಸುವಾಗ ದೋಣಿ ಮಗುಚಿ ಭಾರಿ ಅನಾಹುತ

ಮಳೆ ನೀರಲ್ಲಿ ಮುಳುಗಿದ ಗ್ರಾಮಗಳು! ಅಯ್ಯೋ ಕಾಪಾಡಿ... - youtube
Published on

ಅಂಕೋಲಾ: ಉತ್ತರಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಶಿರೂರು, ಬೆಳ್ಸೆ ಕೂರ್ವೆ, ಕೊಡ್ಸಣಿ ಸೇರಿದಂತೆ ಹಲವು ಗ್ರಾಮ ಸಂಪೂರ್ಣ ಮುಳುಗಡೆ‌ಯಾಗಿದೆ. ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಮಗುಚಿ ನಾಪತ್ತೆಯಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಶಿರೂರು ಗ್ರಾಮದ ಮಹಿಳೆ ಬೀರುಮಾರುಗೌಡ(67) ಹಾಗೂ ಗಂಗಾಧರ ದೇವುಗೌಡ(33) ನಾಪತ್ತೆಯಾದವರು. ಧಾರವಾಡ, ಶಿರಸಿ, ಯಲ್ಲಾಪುರ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಗಂಗಾವಳಿ ನದಿ‌ಯಲ್ಲಿ ಪ್ರವಾಹ ಬಂದಿದೆ.

ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ಜನ-ಜಾನುವಾರು ಸ್ಥಳಾಂತರ ಮಾಡುವ ವೇಳೆ ಅವಘಡ ಸಂಭವಿಸಿದೆ. ನದಿಯ ಇಕ್ಕೆಲದ 7 ಗ್ರಾಮಗಳು ಜಲಾವೃತವಾಗಿವೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇತ್ತ ಕಾಳಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net