ರಸ್ತೆಯನ್ನೇ ಸೀಳಿಕೊಂಡು ಹರಿಯುತ್ತಿದೆ ಮಳೆ ನೀರು.. ಖಾನಾಪುರದಲ್ಲಿ ಬದುಕು ಮೂರಾಬಟ್ಟೆ...

flood in khanapura
Published on

ಬೆಳಗಾವಿ: ಖಾನಾಪೂರ ತಾಲೂಕಿನಲ್ಲಿ ವರುಣನ ಆರ್ಭಟ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ತಾಲೂಕಿನಲ್ಲಿ ನಿನ್ನೆ ರಾತ್ರಿಯಿಡೀ ಸುರಿ ಧಾರಾಕಾರ ಮಳೆಗೆ ಚೋರ್ಲಾ ಘಾಟ್​ನಲ್ಲಿ ಭೂ ಕುಸಿತವಾಗಿದ್ದು, ಕರ್ನಾಟಕ-ಗೋವಾ ನಡುವೆ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕಣಕುಂಬಿ ಮಾವುಲಿ ದೇವಾಲಯ ಬಳಿ ಮಳೆಯ ನೀರು ರಸ್ತೆಯನ್ನು ಸೀಳಿಕೊಂಡು ಹರಿಯುತ್ತಿದೆ. ಖಾನಾಪುರ ತಾಲೂಕಿನ ಬಹುತೇಕ ಕಡೆ ರಸ್ತೆ ಮತ್ತು ಸೇತುವೆಗಳು ಮುಳುಗಡೆಯಾವಗಿವೆ.

ಖಾನಾಪುರ ಪಟ್ಟಣದ ಬೆಳಗಾವಿ- ಪಣಜಿ ಹೆದ್ದಾರಿ ಮೇಲಿನ ಸೇತುವೆಯೂ ಜಲಾವೃತಗೊಂಡಿದೆ. ಲೋಂಡಾ, ರುಮೇವಾಡಿ ಮತ್ತು ಖಾನಾಪುರ ಪಟ್ಡಣದ ಜನವಸತಿ ಪ್ರದೇಶಗಳಿಗೂ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net