ಅಂಕೋಲಾದಲ್ಲಿ ಪ್ರವಾಹ: ನೀರಲ್ಲಿ ಮುಳುಗುತ್ತಿದೆ ಹೋಟೆಲ್​... ಪ್ಲೀಸ್ ಯಾರಾದ್ರೂ ನಮ್ಮನ್ನು ಸ್ಥಳಾಂತರಿಸಿ

flood
Published on

ಉತ್ತರಕನ್ನಡ: ಧಾರಾಕಾರ ಮಳೆಯಿಂದಾಗಿ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಸುಂಕಸಾಳದ ನವಮಿ ಹೋಟೆಲ್​ನಲ್ಲಿ ಸಿಬ್ಬಂದಿ ಮತ್ತು ಗ್ರಾಹಕರು ಸೇರಿ 15 ಮಂದಿ ಬಂಧಿಯಾಗಿದ್ದಾರೆ.

ಹೋಟೆಲ್​ನ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದ್ದು, ಕೆಳ‌ಅಂತಸ್ತಿನಲ್ಲೂ ನೀರು ತುಂಬಿದೆ. ಮಹಿಳೆಯರು, ಮಕ್ಕಳು ಸೇರಿದಂತೆ 15 ಮಂದಿ ಹೊಟೇಲ್‌ನ ಮಹಡಿ ಮೇಲೆ ನಿಂತು ರಕ್ಷಣೆಗಾಗಿ ಎದುರುನೋಡುತ್ತಿದ್ದ ದೃಶ್ಯ ಇಂದು ಕಂಡು ಬಂತು. ಕ್ಷಣಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಆತಂಕ ಮಡುಗಟ್ಟಿದೆ.

ಕಾರವಾರದಿಂದ ಹುಬ್ಬಳ್ಳಿಗೆ ಹೊರಟಿದ್ದ ನಾಲ್ವರು ಅರಬೈಲ್ ಘಟ್ಟದಲ್ಲಿ ಗುಡ್ಡಕುಸಿತ ಆಗಿದ್ದರ ಪರಿಣಾಮ ಹೊಟೇಲ್‌ಗೆ ತೆರಳಿದ್ದರು. ಬಳಿಕ ಸುರಿದ ಭಾರೀ ಮಳೆಯಿಂದಾಗಿ ಹೆದ್ದಾರಿ ಜಲಾವೃತಗೊಂಡಿದ್ದು, ಎಲ್ಲಿಗೂ ತೆರಳಲಾಗದೆ ಹೋಟೆಲ್​ನಲ್ಲೇ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net