ಧಾರಾಕಾರ ಮಳೆ, ಮರಕ್ಕೆ ಕಾರು ಡಿಕ್ಕಿ: ರೈತ ಸಂಘದ ಹಿರಿಯ ಮುಖಂಡರಿಬ್ಬರ ಸಾವು

accident
Published on

ಚಿಕ್ಕಮಗಳೂರು: ನಗರ ಹೊರವಲಯದ ರಾಮನಹಳ್ಳಿ ಬಳಿ ಧಾರಾಕಾರ ಮಳೆಯಿಂದಾಗಿ ಮರಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ರೈತ ಸಂಘದ ಮುಖಂಡರಿಬ್ಬರು ಕೊನೆಯುಸಿರೆಳೆದಿದ್ದಾರೆ.

ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಮಸ್ವಾಮಿ(70) ಮತ್ತು ಎಂ.ರಾಮು(55) ಮೃತ ದುರ್ದೈವಿಗಳು.

ರಾಮಸ್ವಾಮಿ ರಾಮನಗರ ಜಿಲ್ಲೆಯ ಕನಕಪುರ ಮೂಲದವರಾದರೂ ಹಾಸನ ಜಿಲ್ಲೆ ಆಲೂರಿನ ಬೆಳ್ಳವಾರದಲ್ಲಿ ವಾಸವಿದ್ದರು. ಎಂ.ರಾಮು ಅವರು ರಾಮನಗರದ ಚನ್ನಪಟ್ಟಣದ ಮೊಗೇನಹಳ್ಳಿಯವರು.   ಒಟ್ಟು ಮೂವರು ನವಲಗುಂದದಿಂದ ಬೇಲೂರಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net