

ಉತ್ತರಕನ್ನಡ: ಈ ಭಾರಿಯ ಮುಂಗಾರು ಮಳೆ ಹಲೆವಡೆ ನಿರಂತವಾಗಿ ಸುರಿಯುತ್ತಿದ್ದು, ಹಲವರು ಪ್ರವಾಹಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಇದೀಗ ಧಾರಾಕಾರ ಮಳೆಯಿಂದಾಗಿ ಖಾನಾಪುರ-ಲೋಂಡಾ ಮಾರ್ಗ ಸಂಪರ್ಕ ಕಡಿತಗೊಂಡಿದ್ದು, ಜೋಯಿಡಾದ ಆಖೇತಿ ಗ್ರಾಮ ಜಲದಿಗ್ಬಂಧನಕ್ಕೆ ಒಳಗಾಗಿದೆ.
ದಾರಿ ಮಧ್ಯೆ 30ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಅತ್ತ ಮನೆಗೆ ಹೋಗಲೂ ಆಗದೆ, ಇತ್ತ ಊಟ-ಕುಡಿವ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಮಾರ್ಗ ಜಲಾವೃತಗೊಂಡಿದ್ದು, ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನಿನ್ನೆ ಸಂಜೆಯಿಂದ ಪ್ರವಾಹಕ್ಕೆ ಸಿಲುಕಿರುವ ಕನ್ನಡಿಗರ ಕುಟುಂಬ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡುತ್ತಿದೆ. 30 ಜನರಲ್ಲಿ ಮಹಿಳೆಯರು, ಮಕ್ಕಳೂ ಇದ್ದಾರೆ.