

ಕಾರವಾರ: ನದಿಯಲ್ಲಿ ಗಾಳ ಹಾಕುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ದಾಂಡೇಲಿಯಲ್ಲಿ ಭಾನುವಾರ ನಡೆದಿದೆ.
ಮೋಹಿನ್ ಮೆಹಬೂಬ್ ಗುಲ್ಬರ್ಗಾವಾಲೆ(16) ನಾಪತ್ತೆಯಾದ ಬಾಲಕ. ಹಳಿಯಾಳ ರಸ್ತೆಯಲ್ಲಿ ಕಾಳಿ ನದಿಯಲ್ಲಿ ಮೀನು ಹಿಡಿಯಲು ಗಾಳ ಹಾಕಿ ಕುಳಿತ್ತಿದ್ದಾಗ ಮೊಸಳೆ ಆತನನ್ನು ಕಚ್ಚಿ ನೀರಿಗೆ ಎಳೆದೊಯ್ದಿದೆ.
ಅಗ್ನಿಶಾಮಕ, ಪೊಲೀಸ್ ಹಾಗೂ ರಿವರ್ ರ್ಯಾಫ್ಟಿಂಗ್ ತಂಡದ ಸದಸ್ಯರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಸೂಪಾ ಅಣೆಕಟ್ಟೆಯಿಂದ ನೀರು ಹೊರ ಬಿಟ್ಟರೆ ಹುಡುಕಾಟಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ನೀರು ಬಿಡದಂತೆ ಕೆಪಿಸಿಗೆ ವಿನಂತಿಸಲಾಗಿದೆ.