ಕರೊನಾ ಎಫೆಕ್ಟ್​: ಭಾರತೀಯರ ಆಯಸ್ಸಿನಲ್ಲಿ 2 ವರ್ಷ ಇಳಿಕೆ

coronavirus
Published on

ಮುಂಬೈ: ಮಹಾಮಾರಿ ಕರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಕೋಟ್ಯಂತರ ಜನರ ಬದುಕನ್ನೇ ಮೂರಾಬಟ್ಟೆಯಾಗಿಸಿದೆ. ಭಾರತದಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಲಕ್ಷಾಂತರ ಜನ ರಕ್ತ ಸಂಬಂಧಿಕರನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಆರ್ಥಿಕಮಟ್ಟ ಕ್ಷೀಣಿಸಿದ್ದು, ಹಲವು ಸಮಸ್ಯೆ ತಲೆದೋರಿದೆ. ಈ ನಡುವೆ ಮತ್ತೊಂದು ಆಘಾತಕಾರಿ ಅಂಶ ಬಯಲಾಗಿದೆ.

ಕರೊನಾ ಸೋಂಕು ಪರೋಕ್ಷವಾಗಿ ಮಾನವನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಮುಂಬೈನ ಅಂತಾರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರ ಸಂಸ್ಥೆ(ಐಐಪಿಎಸ್​) ಸ್ಟಡಿ ಮಾಡಿದ್ದು, ಕರೊನಾ ಸೋಂಕಿನಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ 2 ವರ್ಷದ ಕಡಿಮೆ ಆಗಲಿದೆ ಎಂಬ ಆಘಾತಕಾರಿ ಅಂಶ ಗೊತ್ತಾಗಿದೆ.

ದೇಶದ ಮಹಿಳೆಯರು ಮತ್ತು ಪುರುಷರು ಆಯಸ್ಸು ತಲಾ 2 ವರ್ಷದಷ್ಟು ಕಡಿಮೆ ಆಗಿದೆ. 2019ರಲ್ಲಿ ಸರಾಸರಿ 69.5 ರಷ್ಟಿದ್ದ ಪುರುಷರ ಜೀವಿತಾವಧಿಯು ಸರಾಸರಿ 67.5ಕ್ಕೆ ಕುಸಿದಿದೆ. ಅದೇ ರೀತಿ ಮಹಿಳೆಯರ ಆಯಸ್ಸು 72 ವರ್ಷದಿಂದ 69.8ಕ್ಕೆ ಕುಸಿದಿದೆ ಎಂದು ಬಿಎಂಸಿ ಪಬ್ಲಿಕ್​ ಹೆಲ್ತ್​ ಜರ್ನಲ್​ನಲ್ಲಿ ಪ್ರಕಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net