ನನ್ನನ್ನು ಸಾಯಿಸಿ ಬಿಡ್ತಾರೆ ಬೇಗ ಬಾ.. ಎಂದು ಕಣ್ಣೀರಿಟ್ಟ ಪ್ರಿಯಕರ, ಆಕೆ ಬರುವಷ್ಟರಲ್ಲಿ ಶವವೂ ಇರಲಿಲ್ಲ...

Honor-Killing
Published on

ವಿಜಯಪುರ: ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪ್ರೀತಿಸಿದ ತಪ್ಪಿಗೆ ಯುವಕನ ಜೀವವನ್ನೇ ಬಲಿ ಪಡೆದ್ರಾ ಅನ್ನೋ ಅನುಮಾನ ಶುರುವಾಗಿದೆ. ಪ್ರೇಯಸಿಗೆ ಕರೆ ಮಾಡಿದ್ದಾತ ನನ್ನನ್ನು ಹೊಡೆದು ಸಾಯಿಸ್ತಿದ್ದಾರೆ ಬೇಗ ಬಾ ಎಂದಿದ್ದ. ಯುವತಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಪ್ರಿಯಕರ ಇರಲಿಲ್ಲ. ಪ್ರೀತಿಸಿದ ಯುವಕನನ್ನು ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಇಲ್ಲಿದೆ ಫುಲ್ ಡೀಟೇಲ್ಸ್.

ಹತ್ತು ವರ್ಷದಿಂದ ಅನ್ಯಕೋಮಿನ ಯುವತಿಯನ್ನು ರವಿ ನಿಂಬರಗಿ ಪ್ರೀತಿಸುತ್ತಿದ್ದ. ಶುಕ್ರವಾರ ಬಳಗಾನೂರನಿಂದ ಸಂತೆಗೆ ಹೋಗಿದ್ದ ರವಿ ವಾಪಸ್​ ಬರುತ್ತಿದ್ದ. ಮಾರ್ಗಮಧ್ಯೆ 8 ಜನರಿದ್ದ ತಂಡ ರವಿ ಮೇಲೆ ಹಲ್ಲೆ ಮಾಡಿ. ಈ ವೇಳೆ ರವಿ, ತನ್ನ ಪ್ರೇಯಸಿ ಅಮ್ರೀನಾ ತಾಂಬೆಗೆ ಕರೆ ಮಾಡಿ ಕಣ್ಣೀರಿಟ್ಟಿದ್ದ. ಬೇಗ ಬಾ ಎಂದು ಕರೆದಿದ್ದ. ಆಕೆ ಸ್ಥಳಕ್ಕೆ ಹೋಗುವಷ್ಟರಲ್ಲಿ ರವಿಯನ್ನ ಕೊಂದ ದುಷ್ಕರ್ಮಿಗಳು ಶವವನ್ನು ಹೊತ್ತೊಯ್ದಿದ್ದಾರಂತೆ. ಈ ವಿಷಯ ತಿಳಿಯುತ್ತಿದಂತೆ ಘಟನಾ ಸ್ಥಳದಿಂದ ಸುಮಾರು 2 ಕಿಲೋ ಮೀಟರ್ ದೂರ ಇರೋ ಪ್ರಿಯಕರನ ಮನೆಗೆ ಓಡಿ ಹೋಗಿ ಯುವತಿ ವಿಷಯ ಮುಟ್ಟಿಸಿದ್ದಳು. ತಕ್ಷಣ ಸ್ಥಳಕ್ಕೆ ಬಂದಿದ್ದ ಕುಟುಂಬಸ್ಥರು ಮಗನಿಗಾಗಿ ತಡಕಾಡಿದ್ದಾರೆ. ಆದ್ರೆ ಎಲ್ಲೂ ರವಿ ಪತ್ತೆಯಾಗಿಲ್ಲ. ಹೀಗಾಗಿ ನೇರವಾಗಿ ಆಲಮೇಲೆ ಠಾಣೆಗೆ ರವಿಯ ಪ್ರೇಯಸಿ ಜತೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.

ಪ್ರೇಯಸಿ ಹೋಗುವಷ್ಟರಲ್ಲಿ ಪ್ರಿಯಕರನನ್ನು ಬರ್ಬರವಾಗಿ ಕೊಂದು ಹಾಕಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. 32 ವರ್ಷದ ರವಿ ನಿಂಬರಗಿಯನ್ನು ಭೀಕರವಾಗಿ ಹತ್ಯೆಗೈದು ಶವವನ್ನೂ ಬಿಡದೇ ದುರುಳರು ಕೊಂಡೊಯ್ದಿದ್ದಾರೆ ಅಂತಾ ಆರೋಪಿಸಲಾಗಿದೆ‌. ಸ್ವತಹ ಪ್ರೇಯಸಿಯೇ ತನ್ನ ತಂದೆ ಹಾಗೂ ಅಣ್ಣ-ತಮ್ಮಂದಿರು ಮತ್ತು ಸಂಬಂಧಿಕರ ವಿರುದ್ಧ ಆರೋಪಿಸಿದ್ದಾಳೆ. ಸದ್ಯ ಆಲಮೇಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಟ್ನಲ್ಲಿ ಭೀಮಾತೀರದಲ್ಲಿ ನಡೆದಿರೋ ಈ ಘಟನೆ ಜಾತಿಯ ವಿಷ ವರ್ತುಲದಲ್ಲಿ ಪ್ರೀತಿಯನ್ನೇ ಕೊಂದು ಬಿಟ್ರಾ ದುರುಳರು? ಅನ್ನೋ ಪ್ರಶ್ನೆಯ ಜತೆಗೆ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದು ಹೋಯ್ತಾ? ಅನ್ನೋ ಆತಂಕಕ್ಕೇ ಕಾರಣವಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net