ಅರ್ಧ ದಾರಿಯಲ್ಲೇ ಲ್ಯಾಂಡ್​ ಆದ ಹೆಲಿಕಾಪ್ಟರ್: ಶಾಸಕ ಭೈರತಿ ಸುರೇಶ್ ಅಪಾಯದಿಂದ ಪಾರು

helicopter
Published on

ಹಾವೇರಿ: ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಿಗ್ನಲ್ ಹಾಗೂ ರೂಟ್ ಮ್ಯಾಪ್ ಸಮಸ್ಯೆಯಿಂದಾಗಿ ಮಾರ್ಗಮಧ್ಯೆ ಲ್ಯಾಂಡ್​ ಆಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಸಂಭವಿಸಿದೆ.

ಹುಬ್ಬಳ್ಳಿಗೆ ತೆರಳಬೇಕಿದ್ದ ಹೆಲಿಕಾಪ್ಟರ್ ಶಿಗ್ಗಾವಿ ತಾಲೂಕು ಬಸವನಾಳ ಗ್ರಾಮದ ಆಟದ ಮೈದಾನದಲ್ಲಿಯೇ ತುರ್ತಾಗಿ ಲ್ಯಾಂಡ್​ ಆಗಿದ್ದು, ಹೆಲಿಕಾಪ್ಟರ್ ನೋಡಿ ನೂರಾರು ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿದ್ದರು.

ಹೆಲಿಕಾಪ್ಟರ್ ಅನ್ನು ಪೈಲೆಟ್ ಸೇಫಾಗಿ ಲ್ಯಾಂಡ್ ಮಾಡಿಸಿದ್ದು, ಶಾಸಕ ಭೈರತಿ ಸುರೇಶ್ ಅಪಾಯದಿಂದ ಪಾರಾಗಿದ್ದರು. ಹಾನಗಲ್ ಚುನಾವಣೆ ಪ್ರಚಾರಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net