ಬೇಡ ಬೇಡ ಕ್ಯಾಮರಾ ಬೇಡ ಎಂದ ಸಚಿವ ಯೋಗೀಶ್ವರ್!

1129828
Published on

ವಿಜಯನಗರ: ತಮ್ಮ ಹೇಳಿಕೆಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಅವರಿಗೆ ಈಗ ಟಿವಿ ಚಾನೆಲ್‌ಗಳ ಕ್ಯಾಮರಾ ಕಂಡರೇ ಭಯವಾಗತೊಡಗಿದೆಯೇನೊ! ಇದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಅವರೇ ವಿಜಯನಗರ ಜಿಲ್ಲಾ ಪ್ರವಾಸದಲ್ಲಿ ಮಾತನಾಡಿದ್ದಾರೆ. ಸುದ್ದಿಗಾಗಿ ಮಾತನಾಡಿಸಲು ಸುದ್ದಿ ವಾಹಿನಿಗಳ ಪತ್ರಕರ್ತರು ಮುಂದಾಗುತ್ತಿದ್ದಂತೆಯೇ ‘‘ಬೇಡ ಬೇಡ ಕ್ಯಾಮರಾ ಬೇಡ’’ ಎಂದು ಹೇಳಿರುವುದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net