

ಮಹಾರಾಷ್ಟ್ರ: ಹೊಸ ವರ್ಷ ಬಂತೆಂದರೆ ಸಾಕು, ಎಲ್ಲರೂ ಪಾರ್ಟಿ ಎಂದು ಪಬ್ನಲ್ಲಿ ಎಂಜಾಯ್ ಮಾಡುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ವಿಭಿನ್ನವಾಗಿ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸುತ್ತಾರೆ. ಇದೀಗ ಬೆಂಗಳೂರಿನ ದಂಪತಿಯೊಬ್ಬರು ಶಿರಡಿ ಸಾಯಿ ಬಾಬಾಗೆ ಚಿನ್ನದ ಕಿರೀಟವನ್ನು ಅರ್ಪಿಸುವ ಮೂಲಕ ನೂತನ ವರ್ಷವನ್ನು ಆರಂಭಿಸಿದ್ದಾರೆ.
ಬೆಂಗಳೂರು ಮೂಲದ ಭಕ್ತರದಾ ದತ್ತ ಹಾಗೂ ಶಿವಾನಿ ದತ್ತ ದಂಪತಿಗಳು ಹೊಸ ವರ್ಷದಂತ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳಿದ್ದಾರೆ. ನಂತರ 928 ಗ್ರಾಂ ತೂಕದ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಇದರೊಂದಿಗೆ ಹೊಸ ವರ್ಷವನ್ನು ಆರಂಭಿಸಿದ್ದಾರೆ.
ದಂಪತಿಗಳು ಇದೀಗ ಶಿರಡಿ ಸಾಯಿ ಬಾಬಾಗೆ ಅರ್ಪಣೆ ಮಾಡಿರುವ ಚಿನ್ನದ ಕಿರೀಟದ ಮೌಲ್ಯ ಸುಮಾರು 46 ಲಕ್ಷದ 70 ಸಾವಿರ ರೂ. ಎಂದು ವರದಿಯಾಗಿದೆ. ಮೊದಲಿನಿಂದಲೂ ನಾವು ಶಿರಡಿ ಸಾಯಿ ಬಾಬಾರನ್ನು ನಂಬಿಕೊಂಡು ಬರುತ್ತಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ವಜ್ರ ಹಾಗೂ ಚಿನ್ನದ ಆಭರಣಗಳನ್ನು ಈ ದಂಪತಿ ಶಿರಡಿ ಸಾಯಿ ಬಾಬಾಗೆ ಅರ್ಪಿಸಿದ್ದರು.