

ಬೆಂಗಳೂರು: ಲಸಿಕೆ ಹಾಕಿಸಿಕೊಳ್ಳಲು ರಾತೋರಾತ್ರಿ ಲಸಿಕಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ಬೊಬ್ಬೆ ಹೊಡೆಯಬೇಡಿ. ಧಾವಂತ, ಆತಂಕ ಬೇಡವೆಂದು ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜ್ಯ ಹಾಗೂ ಬಿಬಿಎಂಪಿ ಪಶ್ಚಿಮ ವಲಯದ ವಾರ್ ರೂಮ್ಗೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ರಾಜ್ಯಕ್ಕೆ ಲಸಿಕೆ ಪೂರೈಕೆ ಪ್ರಾರಂಭವಾಗಿದೆ. ಲಭ್ಯವಾದಷ್ಟು ಲಸಿಕೆ ಹಾಕಲು ಆರೋಗ್ಯ ಇಲಾಖೆ ಎಲ್ಲ ವ್ಯವಸ್ಥೆ ಮಾಡಿದ್ದು, ಅನಗತ್ಯವಾಗಿ ದಿಗಿಲು ಇಲ್ಲವೇ ಮುಗಿಬೀಳುವುದು ಬೇಡವೆಂದು ಸಲಹೆ ನೀಡಿದರು. ಇದನ್ನೂ ಓದಿರಿ ಲಾಕ್ಡೌನ್ ಇದ್ರೂ ಕಾಲೇಜು ಓಪನ್! ಒಳಗೆ ಲೆಕ್ಚರರ್ನ ಬಿಟ್ಟು ಗೇಟ್ ಮುಂದೆ ನಿಂತ ಪ್ರಿನ್ಸಿಪಾಲ್
ರಾಜ್ಯದ ವಾರ್ ರೂಮ್ಗಳು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಳಿ ಪ್ರಕಾರ ದಿನದ 24 ತಾಸು ಶ್ರಮಿಸುತ್ತಿದ್ದಾರೆ ಎಂದು ಬಿಎಸ್ವೈ ಮೆಚ್ಚುಗೆ ವ್ಯಕ್ತಪಡಿಸಿದರು.
ಲಭ್ಯ ಅಂಕಿ-ಅಂಶಗಳ ಪ್ರಕಾರ 337 ರೋಗಿಗಳು 30ಕ್ಕೂ ಹೆಚ್ಚು ದಿನ, 503 ರೋಗಿಗಳು 20ಕ್ಕೂ ಹೆಚ್ಚು ದಿನಗಳಿಂದ ಆಸ್ಪತ್ರೆಗಳಲ್ಲಿದ್ದು, ಅವರನ್ನೆಲ್ಲ ಮನೆಗೆ ಕಳುಹಿಸಿ, ಪರಿಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ದಾಖಲು ವ್ಯವಸ್ಥೆ ಮಾಡಲು ಸೂಚಿಸಿರುವೆ ಎಂದು ಸಿಎಂ ಹೇಳಿದರು.