

ಚಾಮರಾಜನಗರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಟಗರಿನ ತಲೆ ಮೇಲೆ ನೇತುಹಾಕಿದ್ದ "ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ" ಎಂಬ ಬರಹ ಗಮನ ಸೆಳೆಯಿತು.
ಕೊಳ್ಳೇಗಾಲ ತಾಲೂಕಿನ ಅಣಗಳ್ಳಿ ಬಸವರಾಜು ಅವರು ಸ್ವಗ್ರಾಮದಿಂದ ಟಗರು ತಂದು ಅದರ ತಲೆ ಮೇಲೆ "ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ" ಅಂತ ಬರೆದ ನಾಮಫಲಕ ಕಟ್ಟಿ ಸಿದ್ದರಾಮಯ್ಯ ಸಾಗಿ ಬರುತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಟಗರನ್ನು ಕರೆತಂದರು.