ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಲಾಡ್ಜ್​ನಲ್ಲಿ ಮತ್ತೊಬ್ಬ ನೇಣಿಗೆ ಶರಣು!

Santhosh Patil
Published on

ಉಡುಪಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಶಾಂಭವಿ ಲಾಡ್ಜ್​ನಲ್ಲಿ ಇದೀಗ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್(33) ಮೃತ ದುರ್ದೈವಿ. ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್​ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಏ.11ರಂದು ವಾಟ್ಸ್ಆ್ಯಪ್​ ಮೂಲಕ ಸಂದೇಶ ರವಾನಿಸಿದ್ದು. ಮರುದಿನ ಬೆಳಗ್ಗೆ ಉಡುಪಿಯ ಶಾಂಭವಿ ಲಾಡ್ಜ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ ಸಂತೋಷ್ ಸಾವಿನ ಪ್ರಕರಣ ಕೊನೆಗೆ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದೆ. ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಅತ್ತ ಸಂತೋಷ್ ಆತ್ಮಹತ್ಯೆ ಬಳಿಕ ಎರಡು ದಿನದ ಹಿಂದಷ್ಟೇ ಲಾಡ್ಜ್​ನ ಹೆಸರನ್ನು ಬದಲಾಯಿಸಿದ್ದ ಮಾಲೀಕರು ಹೋಮ ಹವನ ಮಾಡಿಸಿದ್ದರು. ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲೂ ಯೋಜನೆ ಮಾಡಿದ್ದರು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಲಾಡ್ಜ್​ನಲ್ಲಿ ನೇಣುಬಿಗಿದುಕೊಂಡು ಸತ್ತಿದ್ದಾನೆ. ಇದು ಸಹಜವಾಗಿ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net