ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು... ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ

cheating fraud
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಇಲ್ಲೊಬ್ಬ ಭೂಪ ತನ್ನ ಪತ್ನಿಯ ಬೆತ್ತಲೆ ಚಿತ್ರಗಳನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಆಕೆಗೆ ತಿಳಿಯದಂತೆ ತನ್ನ ಸ್ನೇಹಿತರಿಗೆ ಕಳಿಸಿ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲ, ತನ್ನ ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪತ್ನಿಗೆ ಚಿತ್ರಹಿಂಸೆ ಕೊಟ್ಟಿದ್ದಾನೆ. ಗಂಡನ ಕಾಟ ಸಹಿಸಲಾಗದೆ ನೊಂದ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಕನಕಪುರ ರಸ್ತೆಯ ನಿವಾಸಿ 30 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು.

ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ಯೋನ್ಯವಾಗಿದ್ದ ಪತಿ, ನಂತರ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ ಆರೋಪಿಯು ಜ್ಯೂಸ್​ನಲ್ಲಿ ಮತ್ತು ಬರುವ ವಸ್ತು ಬೆರೆಸಿ ಪತ್ನಿಗೆ ಕುಡಿಸಿದ್ದ. ಪತ್ನಿ ಪ್ರಜ್ಞೆ ತಪ್ಪಿದ ನಂತರ ಆಕೆಯ ನಗ್ನ ಚಿತ್ರ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪತ್ನಿಗೆ ಪೀಡಿಸುತ್ತಿದ್ದ. ಇದಕ್ಕೆ ಒಲ್ಲೆ ಎಂದಾಕೆಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸಿದ್ದ. ಈ ನಡುವೆ ದೂರುದಾರ ಮಹಿಳೆಯ ತಂದೆ ಮೃತಪಟ್ಟಿದ್ದರು. ತಂದೆಗೆ ಬರುವ ಪೆನ್ಶನ್​ ಹಣ ಕೊಡುವಂತೆ ಪತಿ ವೆಂಕಟಸ್ವಾಮಿ ಹಿಂಸೆ ಕೊಡುತ್ತಿದ್ದ. ಹಣ ಕೊಡಲು ನಿರಾಕರಿಸಿದಾಗ ನಗ್ನ ಚಿತ್ರವನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net