More

    545 PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಕಲಬುರಗಿ ಬಿಜೆಪಿ ನಾಯಕಿಯ ಪತಿ ಅರೆಸ್ಟ್

    ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದೆ. ಈ ಪ್ರಕರಣ ಇದೀಗ ಸಂಬಂಧ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಸಿಐಡಿ ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ.

    2021ರ ಅಕ್ಟೋಬರ್ 3ರಂದು ನಡೆದ 545 ಎಸ್‌ಐ ನೇಮಕಾತಿಗೆ ರಾಜ್ಯದಲ್ಲಿ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಲಿಖಿತ ಪರೀಕ್ಷೆ ಬಳಿಕ ಅಕ್ರಮ ನಡೆದಿರುವ ಕುರಿತು ದೂರುಗಳು ದಟ್ಟವಾಗಿ ಕೇಳಿಬಂದಿದೆ. ಅಕ್ರಮ ನಡೆದಿರುವ ಕುರಿತು ಏಪ್ರಿಲ್ 7ರಂದು ಸಿಕ್ಕ ಖಚಿತ ಮಾಹಿತಿ ಮೇರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಕುರಿತು ಸಿಐಡಿ ತನಿಖೆಗೆ ಆದೇಶಿಸಿದರು. ಈ ಆಧಾರದ ಮೇಲೆ ಏ.9ರಂದು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ನಾಲ್ವರು ಅಭ್ಯರ್ಥಿಗಳು ಮತ್ತು ಮೂವರನ್ನು ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲ ಪರೀಕ್ಷೆ ಬರೆದಿರುವುದು ಜಿಡಿಎ ಬಡಾವಣೆ ಗೋಕುಲ್ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್ ಕೇಂದ್ರದಲ್ಲೇ ಎಂಬುದು ಗಮನಾರ್ಹ. ಬಿಜೆಪಿ ಪ್ರಭಾವಿ ನಾಯಕಿ ದಿವ್ಯಾ ಹಾಗರಿಗೆ ಸೇರಿದ ಸಂಸ್ಥೆ ಇದಾಗಿದ್ದು, ಇವರ ಪತಿ ರಾಜೇಸ್​ ಅವರು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದಿವ್ಯಾ ನಾಪತ್ತೆಯಾಗಿದ್ದಾರೆ. ಭಾನುವಾರ ಸಿಐಡಿ ಪೊಲೀಸರು ಜೇವರ್ಗಿ ಹಳೇ ರಸ್ತೆಯಲ್ಲಿರುವ ದಿವ್ಯಾರ ಮನೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.

    ದಿವ್ಯಾ ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದರು. ಸದ್ಯಕ್ಕೆ ದಿಶಾ ಸಮಿತಿ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿದ್ದು, ಕೌನ್ಸಿಲ್ ಉಪಾಧ್ಯಕ್ಷೆ ಹೊಣೆಯೂ ಹೊತ್ತಿದ್ದಾರೆ. ದಾಳಿ ವೇಳೆ ಮನೆಯಲ್ಲಿ ದಿವ್ಯಾ ಹಾಗರಗಿ ಇರಲಿಲ್ಲ. ಅವರ ಪತಿ ರಾಜೇಶ್​ ಇದ್ದರು. ಅವರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಮನೆಯಲ್ಲಿ ಶಾಲೆಗೆ ಸಂಬಂಧಿಸಿದ ದಾಖಲೆಗಳು, ಈಚೆಗೆ ಅವರು ನಡೆಸಿದ ಹಣಕಾಸು ವ್ಯವಹಾರ ಹೀಗೆ ಎಲ್ಲ ಆಯಾಮಗಳೊಂದಿಗೆ ಶೋಧ ನಡೆಸಿದ್ದಾರೆ.

    https://www.vijayavani.net/a-shivsena-mla-mangesh-kudalkars-wife-dies-by-suicide-at-home/

    ಮಂಗಳೂರಲ್ಲಿ ವಿಷಾನಿಲ ಸೋರಿಕೆ: ತಡರಾತ್ರಿ ಮೂವರು ದುರ್ಮರಣ, ಐವರ ಸ್ಥಿತಿ ಗಂಭೀರ

    ಸನ್ನಿ ಲಿಯೋನ್​ ಫ್ಯಾನ್ಸ್​ಗೆ ಬಂಪರ್​ ಆಫರ್​ ಕೊಟ್ಟ ಮಂಡ್ಯದ ಯುವಕ! ಆದ್ರೆ ಈ 3 ಷರತ್ತು ಪೂರೈಸಲೇಬೇಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts