ಮನೆಗೆ ಬಂದ ಮಗನ ಪ್ರೇಯಸಿ ಮೇಲೆ ಆತನ ತಂದೆಯಿಂದಲೇ ಅತ್ಯಾಚಾರ

rape
Published on

ಚಿಕ್ಕಮಗಳೂರು: ಪ್ರಿಯಕರನನ್ನು ಹುಡುಕಿಕೊಂಡು ಮನೆಗೆ ಬಂದ ಪ್ರೇಯಸಿ ಮೇಲೆ ಆತನ ತಂದೆಯೇ ಅತ್ಯಾಚಾರವೆಸಗಿದ ಹೀನ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

10ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳು ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಚಂದ್ರು ಎಂಬುವರ ಮಗನನ್ನು ಪ್ರೀತಿಸುತ್ತಿದ್ದಳು. ತನ್ನ ಪ್ರಿಯಕರನನ್ನು ನೋಡಲೆಂದು ಬಾಲಕಿ, ಆತನ ಮನೆಗೆ ಇತ್ತೀಚಿಗೆ ಹೋಗಿದ್ದಳು. ಆ ವೇಳೆ ಕೆಲಸಕ್ಕೆಂದು ಪ್ರಿಯಕರ ಮನೆಯಿಂದ ಹೊರಗಡೆ ತೆರಳಿದ್ದ. ಮನೆಯಲ್ಲೇ ಇದ್ದ ಪ್ರಿಯಕರನ ತಂದೆ ಚಂದ್ರು, ಬಾಲಕಿಯನ್ನ ಪುಸಲಾಯಿಸಿ ಮನೆಯಲ್ಲಿಯೇ ಇರಿಸಿಕೊಂಡಿದ್ದ. ನನ್ನ ಮಗ ರಾತ್ರಿ ಬರ್ತಾನೆ. ನೀನು ಇಲ್ಲೇ ಇರು ಎಂದು ಉಳಿಸಿಕೊಂಡಿದ್ದ. ರಾತ್ರಿ ಪ್ರಿಯಕರನಿಗಾಗಿ ಕಾಯುತ್ತಾ ಬಾಲಕಿ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಚಂದ್ರು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಚಂದ್ರುನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net