More

    ಒಂದೇ ಗ್ರಾಮದ ಇಬ್ಬರ ಜತೆ ಯುವಕನ ಲವ್ವಿಡವ್ವಿ… ಪ್ರಿಯಕರನ ಓಲೈಕೆಗಾಗಿ ನಡೆದೇ ಹೋಯ್ತು ಘೋರ ಕೃತ್ಯ

    ಶಿಡ್ಲಘಟ್ಟ: ಪ್ರೀತಿಸಿದ ಯುವಕನನ್ನು ಒಲಿಸಿಕೊಳ್ಳಲು ಆತನ ಹೆಂಡತಿಯ ಕುತ್ತಿಗೆಯನ್ನೇ ಯುವತಿಯೊಬ್ಬಳು ಇರಿದ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿದೆ.

    ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಆನೆಮಡಗು ಗ್ರಾಮದ ಮೋನಿಕಾ ಹಲ್ಲೆಗೆ ಒಳಗಾದವರು. ಮೋನಿಕಾಳನ್ನ ಕೊಲ್ಲಲು ಯತ್ನಿಸಿದ ಯುವತಿ ಹೆಸರು ಗಂಗೋತ್ರಿ. ಇವರಿಬ್ಬರೂ ಒಂದೇ ಗ್ರಾಮದ ನಿವಾಸಿಗಳು. ಇವರಿಬ್ಬರ ಜತೆಯೂ ಗಂಗರಾಜು ಎಂಬಾತ ಲವ್ವಿಡವ್ವಿ ನಡೆಸುತ್ತಿದ್ದ. ಆದರೆ ಯುವತಿಯರಿಬ್ಬರಿಗೂ ಪರಸ್ಪರ ಈ ವಿಷಯ ಗೊತ್ತಿರಲಿಲ್ಲ. ಈ ನಡುವೆ ಗಂಗರಾಜು ಮೋನಿಕಾಳನ್ನ ಮದುವೆ ಆಗಿದ್ದ. ಈ ವಿಚಾರ ತಿಳಿದ ಗಂಗೋತ್ರಿ ಗರಂ ಆಗಿದ್ದಳು. ಮದುವೆ ಆದ ಮೇಲೂ ಗಂಗರಾಜು ಪ್ರೇಯಸಿ ಗಂಗೋತ್ರಿ ಜತೆ ಸಂಪರ್ಕ ಇಟ್ಟುಕೊಂಡಿದ್ದ.

    ಪ್ರಿಯಕರನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಅಡ್ಡಿಯಾಗಿದ್ದ ಆತನ ಪತ್ನಿ ಮೋನಿಕಾಳನ್ನು ಮುಗಿಸಲು ಸಂಚು ಹೂಡಿದ್ದ ಗಂಗೋತ್ರಿ, ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾತನಾಡುವ ನೆಪದಲ್ಲಿ ಬಂದಿದ್ದಳು. ಮೋನಿಕಾಳ ಬಳಿ ಮಾತನಾಡುತ್ತಲೇ ಆಕೆಯ ಕುತ್ತಿಗೆಯನ್ನ ಗಂಗೋತ್ರಿ ಚಾಕುವಿನಿಂದ ಇರಿದಿದ್ದಾಳೆ. ಗಾಯಗೊಂಡ ಮೋನಿಕಾ ಚೀರಾಡುತ್ತಿದ್ದ ಗಂಗೋತ್ರಿ ಕಾಲ್ಕಿತ್ತಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮೋನಿಕಾಳನ್ನ ಅಕ್ಕಪಕ್ಕದ ಮನೆಯವರು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಭವಿಸುತ್ತಿದ್ದಂತೆ ಮೋನಿಕಾಳ ಗಂಡ ಗಂಗರಾಜು ತಲೆ ಮರೆಸಿಕೊಂಡಿದ್ದಾನೆ. ಮೋನಿಕಾ ಪ್ರಾಣಾಪಾಯದಿಂದ ಪಾರಾಗಿದ್ದು, ದಿಬ್ಬೂರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಗೋತ್ರಿಯನ್ನು ಬಂಧಿಸಿದ್ದಾರೆ.

    ನನ್ನ ಗಂಡ ನಿತ್ಯ ಅಶ್ಲೀಲ ವಿಡಿಯೋ ನೋಡ್ತಾನೆ, ವೇಶ್ಯೆಯರ ಜತೆ ಚಾಟಿಂಗ್​ ಮಾಡ್ತಾನೆ… ಪ್ರಶ್ನಿಸಿದ್ರೆ ಹಿಂಸಿಸ್ತಾನೆ…

    ಬೆಳ್ಳಂಬೆಳಗ್ಗೆ ಪೊಲೀಸ್​ ಪೇದೆ ಮಗನ ಭೀಕರ ಕೊಲೆ: ನೂರಾರು ಜನರ ಕಣ್ಣೆದುರೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts