More

    ಲೋಕಸಭಾ ಚುನಾವಣೆ 5ನೇ ಹಂತದ ಮತದಾನ: 49 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಕ್ತಾಯ, ಶೇಕಡ 56.7ರಷ್ಟು ಮತದಾನ

    ನವದೆಹಲಿ: 2024ರ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳು ಪೂರ್ಣಗೊಂಡಿದ್ದು, ಎಂಟು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಮವಾರ ನಡೆದ ಐದನೇ ಹಂತದ ಮತದಾನ ಯಶಸ್ವಿಯಾಗಿ ಮುಕ್ತಾಯವಾಗಿದೆ. ಒಟ್ಟು ಶೇ.56.7ರಷ್ಟು ಮತದಾನವಾಗಿದೆ.

    ಇದನ್ನೂ ಓದಿ: ದೆಹಲಿಯ ಮೆಟ್ರೋ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಬೆದರಿಕೆ ಬರಹ: ಎಎಪಿ ಆರೋಪ

    ಈ ನಡುವೆ ದೇಶದಲ್ಲೇ ಅತಿ ಹೆಚ್ಚು ಮತದಾನ ಪ.ಬಂಗಾಳದಲ್ಲಿ ನಡೆದಿದ್ದು, ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ.73 ರಷ್ಟು ಮತದಾನವಾಗಿದೆ. ಕುತೂಹಲ ಕೆರಳಿಸಿರುವ ಉತ್ತರಪ್ರದೇಶದ ರಾಯ್​ ಬರೇಲಿ, ಅಮೇಥಿ ಕ್ಷೇತ್ರಗಳಲ್ಲೂ ಮತದಾನ ನಡೆಯಿತು.
    ಲಡಾಖ್‌ನಲ್ಲಿ ಶೇ. 67.15ರಷ್ಟು, ಜಾರ್ಖಂಡ್‌ನಲ್ಲಿ ಶೇ. 61.90, ಒಡಿಶಾದಲ್ಲಿ ಶೇ. 60.55, ಉತ್ತರ ಪ್ರದೇಶದಲ್ಲಿ ಶೇ. 55.80, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.54.2, ಬಿಹಾರದಲ್ಲಿ ಶೇ. 52.35., ಮಹಾರಾಷ್ಟ್ರದಲ್ಲಿ ಶೇ. 48.66 ರಷ್ಟು ಕಡಿಮೆ ಮತದಾನವಾಗಿದೆ.

    ಈ ಹಂತದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಒಡಿಶಾದ 5, ಬಿಹಾರದ 5, ಜಾರ್ಖಂಡ್‌ನ 3, ಜಮ್ಮು ಮತ್ತು ಕಾಶ್ಮೀರದ ಒಂದು ಮತ್ತು ಲಡಾಖ್‌ನ ಒಂದು ಸ್ಥಾನಗಳಿಗೆ ಮತದಾನ ನಡೆಯಿತು. ಈ ಹಂತದಲ್ಲಿ ಈ ಬಾರಿ ಚುನಾವಣಾ ಕಣದಲ್ಲಿರುವ ಪ್ರಮುಖರ ಪೈಕಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ( ರಾಯ್​ಬರೇಲಿ), ಬಿಜೆಪಿ ಸ್ಮೃತಿ ಇರಾನಿ (ಅಮೇಥಿ) ಕೇಂದ್ರ ಸಚಿವರಾದ ರಾಜನಾಥ್ ಸಿಂಗ್​ ( ಲಖನೌ) ಮತ್ತು ಪಿಯೂಷ್​ ಗೋಯಲ್ ( ಮುಂಬೈ ಉತ್ತರ), ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಹಾಗೂ ಆರ್​ಜೆಡಿಯ ರೋಹಿಣಿ ಆಚಾರ್ಯ( ಸಾರಣ್) ಕ್ಷೇತ್ರಗಳಿಗೆ ಮತದಾನ ನಡೆಯಿತು.

    ಏತನ್ಮಧ್ಯೆ, ಆರನೇ ಹಂತದ ಲೋಕಸಭೆ ಚುನಾವಣೆಗೆ ಮೇ 25 ರಂದು 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

    ಸಿಎಂ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಇಡಿ ಮೊರೆ, ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಕೋರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts