ಇಲ್ಲಿ ಇರೋರೆಲ್ಲ ಲೇಡಿಸ್​, ಪ್ಲೀಸ್​ ಸರ್​.. ಜೆಂಟ್ಸ್​ ನೇಮಿಸಿ.. ಸಚಿವರ ಬಳಿ ಅಳಲುತೋಡಿಕೊಂಡ ಗ್ರಾಪಂ ಸದಸ್ಯ!

gp
Published on

ಚಾಮರಾಜನಗರ: ''ಇಲ್ಲಿ ಇರೋರೆಲ್ಲ ಮಹಿಳೆಯರೇ, ಆದ್ರೆ ಅವರ ಬಳಿ ಹೆಚ್ಚು ಕಷ್ಟ-ಸುಖ ಹೇಳಕ್ಕಾಗಲ್ಲ. ಪ್ಲೀಸ್​ ಸರ್​, ಪುರುಷ ಸಿಬ್ಬಂದಿ ನೇಮಿಸಿ​...''

ಇದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​ ಬಳಿ ಗ್ರಾಪಂ ಸದಸ್ಯ ರವಿಕುಮಾರ್​ ಎಂಬಾತ ಬೇಡಿಕೊಂಡ ಪರಿ.

ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, "ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ, ಜೆಂಟ್ಸ್ ಹಾಕಿ" ಸರ್ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾಕೆ ಮಹಿಳೆಯರು ಕೆಲಸ ಮಾಡುತ್ತಿಲ್ಲವೇ‌? ಎಂದರು. ''ಮಾಡ್ತಾ ಇದಾರೆ ಸರ್.. ಪಿಡಿಒ, ಸೆಕ್ರೆಟರಿ, ಇಂಜಿನಿಯರ್ ಎಲ್ಲರೂ ಲೇಡಿಸ್. ಹೆಚ್ಚು ಕಷ್ಟ-ಸುಖ ಹೇಳಲಾಗಲ್ಲ. ಪುರುಷ ಸಿಬ್ಬಂದಿ ನೇಮಿಸಿ'' ಎಂದು ಮನವಿ ಮಾಡಿಕೊಂಡರು. ಗ್ರಾಪಂ ಸದಸ್ಯನ ಅಳಲು ಕೇಳಿಸಿಕೊಂಡ ಸಚಿವರು, ಆಯ್ತು ಕಣಪ್ಪಾ.. ಎಂದು ಕೈ ಮುಗಿದು ಮುಂದೆ ನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net