

ಬೆಂಗಳೂರು: ನವದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ನೆನಪಿಸುವಂತಹ ಮತ್ತೊಂದು ಅಮಾನುಷ ಕೃತ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತಾದರೂ ದೇಶದ ಈಶಾನ್ಯ ಭಾಗ ಮತ್ತು ಬಾಂಗ್ಲಾದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದೀಗ ಗ್ಯಾಂಗ್ ರೇಪ್ ಆರೋಪಿಗಳು ಬೆಂಗಳೂರು ಪೊಲೀಸರಿಂದ ಗುಂಡೇಟು ತಿಂದಿದ್ದಾರೆ.
ರಾಮಮೂತಿರ್ನಗರದ ಎನ್ಆರ್ಐ ಲೇಔಟ್ನಲ್ಲಿ 10 ದಿನಗಳ ಹಿಂದೆ 22 ವರ್ಷದ ಬಾಂಗ್ಲಾ ಯುವತಿ ಮೇಲೆ ಇಬ್ಬರು ಮಹಿಳೆಯರ ಸಮ್ಮುಖದಲ್ಲೇ ನಾಲ್ವರು ಯುವಕರ ತಂಡ ಸಾಮೂಹಿಕ ಅತ್ಯಾಚಾರವೆಸಗಿ, ಯುವತಿಯ ಗುಪ್ತಾಂಗಕ್ಕೆ ಬಿಯರ್ ಬಾಟಲಿ ಇಟ್ಟು ಮೃಗೀಯವಾಗಿ ವರ್ತಿಸಿತ್ತು. ಆ ಲೈಂಗಿಕ ದೌರ್ಜನ್ಯದ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದರು. ಈ ವಿಡಿಯೋ ವೈರಲ್ ಬೆನ್ನಲ್ಲೇ ಅಸ್ಸಾಂ ಯುವತಿ ಮೇಲೆ ಬಾಂಗ್ಲಾ ಯುವಕರ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಈಶಾನ್ಯ ಭಾರತದಲ್ಲಿ ವೈರಲ್ ಆಗಿದ್ದು, ಜನಾಂಗೀಯ ಕಿಚ್ಚು ಹಚ್ಚಿದೆ. ಇದನ್ನೂ ಓದಿರಿ ನೀನು ಪವರ್‌ಫುಲ್ ಸಂಸದ, ತಾಕತ್ತಿದ್ರೆ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿಸು…