

ಬೆಂಗಳೂರು: ಸಿಇಟಿ-2021ರ ನೈಜ ಸೀಟು ಹಂಚಿಕೆಯ ಫಲಿತಾಂಶ ನ.26ರಂದು ಪ್ರಕಟವಾಗಲಿದೆ. ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಣಕು ಸೀಟು ಹಂಚಿಕೆ ಮಾಡಿದ್ದು, ಆಯ್ಕೆ ಬದಲು ಮಾಡಿಕೊಳ್ಳಲು ನ.23ರವರೆಗೆ ಅವಕಾಶ ನೀಡಿದೆ.
ವಿದ್ಯಾರ್ಥಿಗಳು ಆಯ್ಕೆ ಮಾಡಿರುವ ಕಾಲೇಜುಗಳ ಪಟ್ಟಿ, ವಿದ್ಯಾರ್ಥಿಗಳ ಮೀಸಲಾತಿಗಳನ್ನು ಪರಗಣಿಸಿ ಸೀಟು ಹಂಚಿಕೆ ಮಾಡಲಿದೆ. ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ನ.26ರ ಬೆಳಗ್ಗೆ 11 ಗಂಟೆ ನಂತರ ಬಿಡುಗಡೆ ಮಾಡಲಿದೆ.
ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ಚಾಯ್ಸ್ ಆಯ್ಕೆ ಮಾಡಿಕೊಳ್ಳಲು ನ.27ರಿಂದ 30ರವರೆಗೆ ಅವಕಾಶ ನೀಡಿದೆ. ಶುಲ್ಕ ಪಾವತಿಸಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನ.29ರಿಂದ ಡಿ.1ರವರೆಗೆ ಅವಕಾಶ ಕಲ್ಪಿಸಿದೆ. ಶುಲ್ಕ ಪಾವತಿಸಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಶುಲ್ಕ ಪಾವತಿಸಿ ಚಾಯ್ಸ್-1 ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕಿದೆ.
ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಡಿ.3 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ http://kea.kar.nic.in ನೋಡಬಹುದು.