ಅಪ್ಪುಗಾಗಿ ಬೈಕ್ ರೈಡ್: ಫ್ರೀಡಂ ಪಾರ್ಕ್​ನಿಂದ ಪುನೀತ್​ ಸಮಾಧಿವರೆಗೂ ಬೈಕ್ ಸವಾರಿ, ಯಾರು ಬೇಕಿದ್ರೂ ಬನ್ನಿ...

New Project (22)
Published on

ಬೆಂಗಳೂರು: ನ.28ರಂದು 'ಅಪ್ಪುಗಾಗಿ ಬೈಕ್ ರೈಡ್' ಹೆಸರಿನಲ್ಲಿ ಫ್ರೀಡಂ ಪಾರ್ಕ್​ನಿಂದ ಅಪ್ಪು ಸಮಾಧಿವರೆಗೂ ಬೈಕ್ ರೈಡ್ ನಡೆಯಲಿದೆ.

ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೈಕ್​ ರೈಡ್​ನಲ್ಲಿ ಯಾರು ಬೇಕಿದ್ರೂ ಭಾಗವಹಿಸಬಹುದು ಎಂದು ಕಾರ್ಯಕ್ರಮ ಆಯೋಜಕರಾದ ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ತಿಳಿಸಿದೆ. ಬೈಕ್​ ರೈಡ್​ಗೆ ರಿಜಿಸ್ಟರ್​ ಆಗುವ ಪ್ರತಿಯೊಬ್ಬರಿಗೂ ಟೀ-ಶರ್ಟ್​, ಬ್ಯಾಡ್ಜ್​, ಸರ್ಟಿಫಿಕೇಟ್​, ಉಪಹಾರದ ವ್ಯವಸ್ಥೆ ಇರಲಿದೆ. ಪ್ರತಿಯೊಬ್ಬರೂ ಬೈಕ್​ ರೈಡ್​ ಮಾಡುವಾಗ ಹೆಲ್ಮೆಟ್​ ಧರಿಸುವುದು ಕಡ್ಡಾಯ ಎಂದು ಸೂಚನೆ ನೀಡಿದೆ.

ನಟ ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನು ಅಗಲಿದ್ದರೂ ನಿತ್ಯ ನೆನಪಿನಲ್ಲೇ ಇರುತ್ತಾರೆ. ಅಪ್ಪು ಅವರ ನಿತ್ಯ ಚಲನವನಗಳನ್ನು ಗಮನಿಸಿ, ಅವರ ನೆನಪಿಗಾಗಿ ನಮ್ಮ ದಿಚಕ್ರ ಸಂಸ್ಥೆ ಹಾಗೂ ಇಂಚರ ಸ್ಟುಡಿಯೋ ವತಿಯಿಂದ ''ರೈಡ್​ ಫಾರ್​ ಅಪ್ಪು- ಯುವರತ್ಮನಿಗೆ ಅರ್ಪಣೆ'' ನಾಮಾಂಕಿತದಲ್ಲಿ ಸ್ವಾತಂತ್ರ್ಯ ಉದ್ಯಾನವನದಿಂದ ಅಪ್ಪು ಅವರ ಸಮಾಧಿವರೆಗೆ ಬೈಕ್​ ರೈಡ್​ ಅನ್ನು ನ.28ರಂದು ಹಮ್ಮಿಕೊಳ್ಳಲಾಗಿದೆ. ಅಪ್ಪು ಅವರ ಯುವ ಅಭಿಮಾನಿಗಳು ಈ ಮೆರವಣಿಗೆಯಲ್ಲಿ ತಮ್ಮ ಬೈಕ್​ನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಪ್ಪು ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ತಮ್ಮಲ್ಲಿ ವಿನಂತಿ ಎಂದು ದ್ವಿಚಕ್ರ ಸಂಸ್ಥೆ ಮತ್ತು ಇಂಚರ ಸ್ಟುಡಿಯೋ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net