More

    ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ.ರಾಜ್​- ಪುನೀತ್ ಜೀವನ ಚರಿತ್ರೆ

    ಬೆಂಗಳೂರು: ಮುಂಬರುವ ಗಣರಾಜ್ಯೋತ್ಸವದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಲಾಲ್​ಬಾಗ್​ನ ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಪ್ರೀತಿಯ ‘ಅಪ್ಪು’ ಅವರನ್ನ ಕಣ್ತುಂಬಿಕೊಳ್ಳಬಹುದು. ಕರುನಾಡಿನ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಾಗಿ ಮೆರೆದ ಅಪ್ಪು ಅವರ ಅಗಲಿಕೆ ನೋವು ಕಾಡತ್ತಲೇ ಇದೆ. ನೋವಿನಲ್ಲಿ ಇರುವ ಅಭಿಮಾನಿಗಳು ವಿಧದ ಜಾತಿಯ- ಬಣ್ಣಬಣ್ಣದ ಹೂವಿನಲ್ಲಿ ಅರಳುವ ಅಪ್ಪು ಅವರನ್ನ ಕಣ್ತುಂಬಿಕೊಂಡು ನಮಿಸಿಲು ಸಿದ್ಧರಾಗಿ.

    ಹೌದು, 2022ರ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ಪುನೀತ್​ ರಾಜ್​ಕುಮಾರ್​ ಮತ್ತು ಡಾ.ರಾಜ್​ಕುಮಾರ್​ ಅವರ ಜೀವನ ಚರಿತ್ರೆಯನ್ನ ಫಲಪುಷ್ಪಗಳಿಂದ ಅನಾವರಣ ಮಾಡಲಾಗುತ್ತೆ. ಆ ಮೂಲಕ ಇಬ್ಬರಿಗೂ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಈ ಕುರಿತು ತೋಟಗಾರಿಕೆ ಇಲಾಖೆ ತೀರ್ಮಾನ ತೆಗೆದುಕೊಂಡಿದ್ದು, ಮೈಸೂರು ಉದ್ಯಾನಕಲಾ ಸಂಘಟ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

    ಪುನೀತ್​ ಅಗಲಿಕೆ ನೋವ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದೀಗ ಹೂವಿನಲ್ಲಿ ಕಂಗೊಳಿಸುವ ಅಪ್ಪು ಮತ್ತು ಡಾ.ರಾಜ್​ಕುಮಾರ್​​ ಅವರ ಜೀವನ ಚರಿತ್ರೆಯನ್ನ ಕಣ್ತುಂಬಿಕೊಳ್ಳಲು ಡಾ.ರಾಜ್​ ಕುಟುಂಬದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ಇಷ್ಟಕ್ಕೆ ನಿಲ್ಲಲ್ಲ, ಇನ್ನೂ ಇದೆ ಮಳೆ ಕಾಟ.. ಏನು ಮಾಡೋಕೂ ಆಗಲ್ಲ: ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

    ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ‌ ರೂ.‌ ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts