More

    140 ರೂಪಾಯಿ ದಾಟಿತು 1 ಕೆಜಿ ಟೊಮ್ಯಾಟೊ ಬೆಲೆ!

    ಕೋಲಾರ: ವರ್ಷಧಾರೆಯ ನಡುವೆ ಕೋಲಾರ ಎಪಿಎಂಸಿಯಲ್ಲಿ ಟೊಮ್ಯಾಟೊ ಆವಕ ತೀವ್ರ ಕುಸಿತ ಕಂಡಿದ್ದು, ಪರಿಣಾಮ ಟೊಮ್ಯಾಟೊ ದರ ಗಗನಕ್ಕೇರಿದೆ.

    ಒಂದು ತಿಂಗಳಿಂದ ತೇವಾಂಶ ಹೆಚ್ಚಾಗಿ ಟೊಮ್ಯಾಟೊ ಇನ್ನಿತರ ತರಕಾರಿಗಳಿಗೆ ರೋಗಬಾಧೆ ಹೆಚ್ಚಾಗಿ ಬೆಳೆ ನಷ್ಟವಾಗಿದೆ. ಇಳುವರಿಯಕಲ್ಲೂ ತೀವ್ರ ಕುಸಿತ ಕಂಡುಬಂದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾನಿಗೀಡಾಗಿದೆ. ಜಿಟಿಜಿಟಿ ಮಳೆಗೆ ಇಳುವರಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಲಾರ ಎಪಿಎಂಸಿಗೆ ತರಕಾರಿಗಳ ಆವಕ ತೀರಾ ಕಡಿಮೆ ಆಗಿದೆ.

    140 ರೂಪಾಯಿ ದಾಟಿತು 1 ಕೆಜಿ ಟೊಮ್ಯಾಟೊ ಬೆಲೆ!

    ಶುಕ್ರವಾರ ಕೋಲಾರದಲ್ಲಿ ಗುಣಮಟ್ಟದ ಟೊಮ್ಯಾಟೊ 15 ಕೆಜಿ ಬಾಕ್ಸ್​ ಒಂದರ ಬೆಲೆ 1500 ರೂಪಾಯಿ ದಾಟಿದ್ದರೆ ಕೇವಲ ಒಂದೇ ಒಂದು ಲಾಟ್​ ಪ್ರತಿ ಬಾಕ್ಸ್​ಗೆ 2000 ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 140 ರೂಪಾಯಿ ದಾಟಿದೆ.

    10,000-12,000 ಕ್ವಿಂಟಾಲ್​ ಟೊಮ್ಯಾಟೊ ಆವಕವಾಗುತ್ತಿದ್ದ ಮಾರುಕಟ್ಟೆಯಲ್ಲಿ ಶುಕ್ರವಾರ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಂದರೆ 4664 ಕ್ವಿಂಟಾಲ್​ನಷ್ಟು ಆವಕವಾಗಿತ್ತು. ಗುಣಮಟ್ಟದ ಟೊಮ್ಯಾಟೊ ಬಾಕ್ಸ್​ 1,500 ರೂಪಾಯಿಗೆ ಮೇಲ್ಪಟ್ಟು ಹರಾಜಾದರೆ, ಕೆಆರ್​ಎಸ್​ ಮಂಡಿಯಲ್ಲಿ 20 ಬಾಕ್ಸ್​ ಇದ್ದ ಒಂದು ಲಾಟ್​ 2000 ರೂ.ಗೆ ಹರಾಜು ಕಂಡಿದೆ.
    ಕೆಲವು ಮಂಡಿಗಳಲ್ಲಿ ಮಾಲೀಕರು ಸ್ಪರ್ಧೆಯ ಮೇಲೆ ಹರಾಜು ಕೂಗುವುದರಿಂದ ಒಂದು ಲಾಟ್​ ದಾಖಲೆ ಬೆಲೆಗೆ ಹರಾಜಾಗಿದೆ. ಆವಕ ಕಡಿಮೆ ಇದ್ದುದರಿಂದ ಸರಾಸರಿ 1500 ರೂ.ಗೆ ಹರಾಜು ಕಾಣುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ಎಸ್​.ರವಿಕುಮಾರ್​ ತಿಳಿಸಿದ್ದಾರೆ.

    ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್​ ಮಾಡಿಸಿದ್ರು… ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

    ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ‌ ರೂ.‌ ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು

    ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ನೀರಲ್ಲಿ ತೇಲಿ ಬಂತು ಶವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts