ಹಿಟ್ ಆ್ಯಂಡ್ ರನ್, ಪ್ರಕರಣ ದಾಖಲು

Hit And Run new
Published on

ಸುಳ್ಯ: ನಗರದ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಮೂರು ವಾಹನಕ್ಕೆ ಗುದ್ದಿ ಬಳಿಕ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಮತ್ತೊಂದು ಕಾರು ಚಾಲಕ ಬೆನ್ನಟ್ಟಿ ಹಿಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಐವರ್ನಾಡಿನ ವ್ಯಕ್ತಿಯೊಬ್ಬ ಸುಳ್ಯ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬರುತ್ತಿದ್ದು, ಪೈಚಾರು ಸಮೀಪ ಒಂದು ಪಿಕಪ್ ಹಾಗೂ ಎರಡು ಕಾರುಗಳಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದಾನೆ. ಅಪಘಾತಕ್ಕೊಳಗಾದ ಕಾರುಗಳ ಪೈಕಿ ಒಂದು ಕಾರಿನ ಚಾಲಕ ಆತನನ್ನು ಬೆನ್ನಟ್ಟಿದ್ದು, ಹಳೇಗೇಟಿನ ಸಮೀಪ ತಡೆದು ನಿಲ್ಲಿಸಿದ್ದಾನೆ. ಇದೇ ವೇಳೆ ಉಳಿದ ಎರಡು ವಾಹನಗಳ ಚಾಲಕರು ಸಹಿತ ಸಾರ್ವಜನಿಕರು ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳಕ್ಕಾಗಮಿಸಿದ ಸುಳ್ಯ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net