ಗೌರಿ ಹಬ್ಬದ ದಿನವೇ ದುರಂತ: ಕಾಲುವೆಗೆ ಕಾರು ಬಿದ್ದು ದಂಪತಿ ಸಾವು, ನೀರಲ್ಲಿ ಕೊಚ್ಚಿಹೋದ ಮಗ

New Project(1)
Published on

ರಾಯಚೂರು: ಮಸ್ಕಿ ತಾಲೂಕಿನ ಗುಡದೂರು ಬಳಿ ತುಂಗಭದ್ರಾ ಎಡದಂಡೆ ಕಾಲುವೆಗೆ ಕಾರು ಬಿದ್ದು, ದಂಪತಿ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಸಂಭವಿಸಿದೆ. ಇವರ ಪುತ್ರ ನೀರಿನಲ್ಲಿ ಕೊಚ್ಚಿಹೋಗಿದ್ದು, ಶೋಧಕಾರ್ಯ ಮುಂದುವರಿದಿದೆ.

ಲಿಂಗಸುಗೂರು ತಾಲೂಕಿನ ಗೋನವಾಟ್ಲ ಗ್ರಾಮದ ರ್ಯನಾರಾಯಣ(55) ಮತ್ತು ಸುಬ್ಬಲಕ್ಷ್ಮಿ(50) ದಂಪತಿ ಮೃತರು. ಕಾರು ಚಾಲನೆ ಮಾಡುತ್ತಿದ್ದ ಪುತ್ರ ಶ್ರೀನಿವಾಸ (31) ಕಾಲುವೆ ನೀರಲ್ಲಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗೌರಿ ಹಬ್ಬದಂದೇ ಈ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

ಅಪ್ಪ-ಅಮ್ಮ-ಮಗ ಸೇರಿ ಮೂವರು ಕಾರಿನಲ್ಲಿ ಗಂಗಾವತಿ ತಾಲೂಕಿನ ಕಲ್ಗುಡಿಗೆ ಹೊರಟಿದ್ದರು. ಮಗ ಕಾರು ಚಾಲನೆ ಮಾಡುತ್ತಿದ್ದ. ನಿಯಂತ್ರಣ ತಪ್ಪಿದ ಕಾರು ಕಾಲುವೆಗೆ ಬಿದ್ದಿದೆ. ಸೇತುವೆ ಕಿರಿದಾಗಿರುವುದೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಆಂಧ್ರದ ನೋಂದಣಿ ಇರುವ ಕಾರು ನೆಕ್ಕುಂಟಿ ಶ್ರೀನಿವಾಸ ಎನ್ನುವವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಈಜುಗಾರರ ಸಹಾಯದಿಂದ ದಂಪತಿ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಬಳಗಾನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net