More

    ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ದಶಕದ ಬಳಿಕ ಇತಿಹಾಸ ಪ್ರಸಿದ್ಧ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯ ನೀರಿನಲ್ಲಿ ಮುಳುಗುತ್ತಿದೆ.

    ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯ ಬೋರನಕಣಿವೆ ಜಲಾಶಯದ ಹಿನ್ನೀರಿನಲ್ಲಿದೆ. ದಶಕದ ಹಿಂದೆ ಸುವರ್ಣಮುಖಿಯಲ್ಲಿ ನೀರು ಹೆಚ್ಚಾಗಿದ್ದಾಗ ಮುಳುಗಿದ್ದ ದೇವಾಲಯ, ಇದೀಗ ಮತ್ತೊಮ್ಮೆ ಮುಳುಗುತ್ತಿದ್ದು ನೋಡಲು ಜನಸಾಗರ ಹರಿದು ಬರುತ್ತಿದೆ. ನೀರನ್ನೂ ಲೆಕ್ಕಿಸದೆ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.

    ದಶಕದ ಬಳಿಕ ನೀರಲ್ಲಿ ಮುಳುಗುತ್ತಿದೆ ಕಾರೇಹಳ್ಳಿ ಶ್ರೀ ರಂಗನಾಥಸ್ವಾಮಿ! ಕಣ್ತುಂಬಿಕೊಳ್ಳಲು ಹರಿದು ಬರ್ತಿದೆ ಜನಸಾಗರ

    ಈಗಾಗಲೇ ದೇವಸ್ಥಾನದ ಒಳಗೆ ನೀರು ಬಂದಿದ್ದು, ದೇವರ ಮೂರ್ತಿಯ ಅರ್ಧಭಾಗ ಮುಳುಗಿದೆ. ಮಳೆ ಮುಂದುವರಿದರೆ ಮುಂದಿನ ಒಂದು ವಾರದೊಳಗೆ ದೇವಸ್ಥಾನ ಮುಳುಗಡೆಯಾಗಲಿದೆ. 2011ರಲ್ಲಿ ಬೋರನಕಣಿವೆ ತುಂಬಿದ್ದಾಗ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು.

    ಬೋರನಕಣಿವೆ ಜಲಾಶಯ ತುಂಬಿದಾಗ ದೇವಾಲಯ ಪೂರ್ತಿ ಜಲಾವೃತವಾಗುತ್ತದೆ. ಮೂಲ ಮೂರ್ತಿಯನ್ನು ಹಿತ್ತಾಳೆ ಕೊಳಗದಿಂದ ಮುಚ್ಚಿ ಕಾರೇಹಳ್ಳಿಯಲ್ಲಿರುವ ಮತ್ತೊಂದು ದೇವಸ್ಥಾನದಲ್ಲಿ ಪೂಜೆ ನಡೆಸುವುದು ವಾಡಿಕೆ. ಮಂಗಳವಾರದಿಂದ ದಡದಲ್ಲಿರುವ ಮತ್ತೊಂದು ದೇವಾಲಯದಲ್ಲಿ ಪೂಜೆ ಮಾಡಲಾಗುವುದು.
    |ಆರ್.ಗೋವಿಂದಸ್ವಾಮಿ ಅರ್ಚಕ

    ನೀರಿನಲ್ಲಿ ಮುಳುಗುತ್ತಿದ್ದ ಬಸ್​, 50 ಪ್ರಯಾಣಿಕರನ್ನು ರಕ್ಷಿಸಿದ ಸ್ಥಳೀಯ ಯುವಕರು! ರಾಮನಗರದಲ್ಲಿ ತಪ್ಪಿದ ಅನಾಹುತ

    ಅಮಿತ್ ಶಾ ಮನೆ ಬಳಿ ಪ್ರತಿಭಟನೆ ಮಾಡಲು ಹೋಗಿದ್ದೆ… ಎನ್ನುತ್ತಲೇ ಕರ್ನಾಟಕ ಪೊಲೀಸರ ವಿರುದ್ಧ ಕಿಡಿಕಾರಿದ ನವ್ಯಶ್ರೀ!

    ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts