More

    ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

    ಚಾಮರಾಜನಗರ: ರಾಮನಗರ, ಮಂಡ್ಯ, ಬೆಂಗಳೂರು ಸೇರಿದಂತೆ ಧಾರಾಕಾರ ಮಳೆಯಾಗುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲೂ ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ‌ ಗ್ರಾಮಗಳು ಜಲಾವೃತಗೊಳ್ಳುತ್ತಿದ್ದು,‌ ಸೋಮವಾರ ಕಲ್ಯಾಣ ‌ಮಂಟಪಗಳಿಗೂ ನೀರು ನುಗ್ಗಿ ಮದುವೆ ಮನೆಯಲ್ಲಿ ಫಜೀತಿ ಸೃಷ್ಟಿಯಾಗಿದೆ.

    ಚಾಮರಾಜನಗರ ನಂದಿ ಭವನ ಹಾಗೂ ಶಿವಕುಮಾರಸ್ವಾಮಿ ಭವನ ಕಲ್ಯಾಣ ಮಂಟಪಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಸೋಮವಾರ(ಇಂದು) ಈ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ನೆಲ ಮಹಡಿಯಲ್ಲಿರುವ ಊಟದ‌ ಹಾಲ್​ಗೆ ನೀರು ನುಗ್ಗಿ ಅಡುಗೆ ಕೊಠಡಿ ಜಲಾವೃತಗೊಂಡಿದೆ.ಆಹಾರ‌ ಪದಾರ್ಥಗಳು‌ ನೀರು ಪಾಲಾಗಿವೆ. ಮದುವೆಗೆ ಆಗಮಿಸಿದ್ದ ಸಂಬಂಧಿಕರು, ಕುಟುಂಬಸ್ಥರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.

    ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

    ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಚುಂಗಡಿಪುರ ಗ್ರಾಮ ಮಳೆಯ ಆರ್ಭಟಕ್ಕೆ ಜಲಾವೃತಗೊಳ್ಳುತ್ತಿದೆ. ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಕೆರೆ ಹಳ್ಳದಲ್ಲಿರುವ ಹಳ್ಳಿಗೆ ನೀರು ಹರಿಯುತ್ತಿದೆ.

    ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

    ಯಳಂದೂರು ತಾಲೂಕಿನ ಹಲವೆಡೆ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ಕೆಸ್ತೂರು ಗ್ರಾಮದ‌ ಅಂಬೇಡ್ಕರ್ ಕಾಲನಿಯಲ್ಲಿ ತಗ್ಗು ಪ್ರದೇಶದ ಮನೆಗಳು ಜಲಾವೃತಗೊಂಡಿವೆ. ನಿವಾಸಿಗಳ ಬದುಕು ಮೂರಾಬಟ್ಟೆಯಾಗಿದೆ. ಮನೆಗೆ ವಿಷಜಂತುಗಳು ನುಗ್ಗಿರುವ ಆತಂಕ ಎದುರಾಗಿದೆ.

    ರಾಮನಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ, ರಸ್ತೆಗಳು ಜಲಾವೃತ, ವಾಹನಗಳ ಮುಳುಗಡೆ

    ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts