ರಾಮನಗರದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ, ರಸ್ತೆಗಳು ಜಲಾವೃತ, ವಾಹನಗಳ ಮುಳುಗಡೆ

ramanagara rain
Published on

ರಾಮನಗರ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಾಧ್ಯಂತ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಮುಂಜಾನೆ 4 ಗಂಟೆ ಸುಮಾರಿಗೆ ಬಿರುಸಿನಿಂದಲೇ ಆರಂಭಗೊಂಡ ಮಳೆ 8 ಗಂಟೆ ಕಳೆದರೂ ಬಿಡುವು ನೀಡದೆ ಧಾರಾಕಾರವಾಗಿ ಸುರಿದಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್​ ಆಗಿದೆ. ನೀರಿನಲ್ಲಿ ವಾಹನ ಚಲಾಯಿಸಲು ಮುಂದಾದ ಪರಿಣಾಮ ಕಾರೊಂದು ನೀರಿನಲ್ಲಿ ಮುಳಿಗಿದೆ. ಬಿಳಗುಂಬ ಕ್ರಾಸ್​ ಬಳಿ ಮಳೆ ನೀರಲ್ಲಿ ಖಾಸಗಿ ಬಸ್​ ಅರ್ಧದಷ್ಟು ಮುಳುಗಿದೆ. ಇನ್ನು ರೈಲೆ ಹಳಿಗಳೂ ಜಾಲವೃತಗೊಂಡಿದ್ದು, ನೀರ ಮೇಲೆ ರೈಲು ಸಂಚರಿಸುತ್ತಿರುವಂತೆ ಗೋಚರಿಸುತ್ತಿದೆ.

ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗಿದೆ. ಎಂದಿನಂತೆ ಕೆಲಸಗಳಿಗೆ ತೆರಳಬೇಕಿದ್ದ ಜನತೆ ತೊಂದರೆ ಅನುಭವಿಸಿದ್ದಾರೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ನಡೆಯಬೇಕಿದ್ದ ವ್ಯಾಪಾರಕ್ಕೂ ಕತ್ತರಿ ಬಿದ್ದಿದೆ. ಮಾರುಕಟ್ಟೆಗಳ ಬಳಿ ಜನತೆ ಸುಳಿಯದಂತಾಗಿದ್ದು, ವ್ಯಾಪಾರಾಸ್ಥರು ಮಳೆ ನಿಲ್ಲುವಿಕೆಗಾಗಿಯೇ ಪ್ರಾರ್ಥನೆ ಮಾಡುತ್ತಿದ್ದಾರೆ.

ಸಂಚಾರ ಬಂದ್: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಭಾರಿ ನೀರು ಸಂಗ್ರಹವಾಗಿರುವ ಕಾರಣದಿಂದಾಗಿ ಸಂಚಾರ ಬಂದ್​ ಆಗಿದೆ. ರಾಮನಗರ ಬಸವನಪುರ, ಕನಕಪುರ ಸರ್ಕಲ್​ನಲ್ಲಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವ ಕಾರಣ ವಾಹನಗಳು ಸಾಲುಗಟ್ಟಿ ನಿಂತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net