

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಾಳಿಗಾ ಕಾಲೇಜು ಸಮೀಪದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಹಿಂಭಾಗ ನಿನ್ನೆ(ಬುಧವಾರ) ಸಂಜೆ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿ, ಸ್ಥಳೀಯರನ್ನ ಬೆಚ್ಚಿಬೀಳಿಸಿತ್ತು.
ಪೊಲೀಸರು ಸುತ್ತಲೂ ಬ್ಯಾರಿಕೇಡ್ ಹಾಕಿ ರಾತ್ರಿಯಿಡೀ ಕಾದಿದ್ದರು. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು ಪರಿಶೀಲಿಸಿದೆ. ಪಿಯುಸಿ ಪೈಪ್ನಲ್ಲಿ ಕಾಗದ ತುಂಬಿ ಬಾಬ್ ಮಾದರಿಯ ವಸ್ತು ಮಾಡಲಾಗಿತ್ತು. ಆದರೆ, ಇದು ನಿಜವಾದ ಬಾಂಬ್ ಅಲ್ಲ ಎಂದು ಬಾಂಬ್ ನಿಷ್ಕ್ರಿಯ ದಳ ತಿಳಿಸಿದ್ದು, ಕುಮಟಾದಲ್ಲಿ ಸೃಷ್ಟಿಯಾಗಿದ್ದ ಆತಂಕ ದೂರವಾಗಿದೆ.
ಬಾಂಬ್ಗೆ ಬೇಕಾದ ಯಾವುದೇ ವಸ್ತು ಪತ್ತೆಯಾಗಿಲ್ಲ. ಬಾಂಬ್ ಮಾದರಿ ವಸ್ತು ಇಟ್ಟು ಹೆದರಿಸಿದವರ ಬಗ್ಗೆ ತನಿಖೆ ನಡೆದಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.