ಬ್ಲೂಟೂತ್​ ಹೆಡ್​ಫೋನ್​ ಸ್ಫೋಟ: ನವವಿವಾಹಿತ ಸಾವು

bluetooth
Published on

ಜೈಪುರ: ಬ್ಲೂಟೂತ್​ ಹೆಡ್​ಫೋನ್​ ಸ್ಫೋಟಗೊಂಡು 28 ವರ್ಷದ ನವವಿವಾಹಿತ ಯವಕನೊಬ್ಬ ಮೃತಪಟ್ಟಿದ್ದಾನೆ.

ರಾಕೇಶ್​ ಕುಮಾರ್​ ನಗರ್​ ಮೃತ ದುರ್ದೈವಿ. 28 ವರ್ಷದ ಈತ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದ. 5 ತಿಂಗಳ ಹಿಂದಷ್ಟೆ ಅಂದರೆ ಕಳೆದ ಫೆಬ್ರವರಿಯಲ್ಲಿ ರಾಕೇಶ್​ಗೆ ಮದುವೆ ಆಗಿತ್ತು. ಶುಕ್ರವಾರ ಬ್ಲೂಟೂತ್​ ಹೆಡ್​ಫೋನ್​ ಅನ್ನು ಕಿವಿಗೆ ಹಾಕಿಕೊಂಡು ಮಾತನಾಡುತ್ತಿರುವಾಗಲೇ ಸ್ಫೋಟಗೊಂಡಿದೆ.

ಪರಿಣಾಮ ಯುವಕನ ಕಿವಿಯಲ್ಲಿ ರಕ್ತ ಬಂದಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಸಿದ್ಧಿ ವಿನಾಯಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಅವನ ಕಿವಿ ಪೂರ ಸುಟ್ಟ ಗಾಯವಾಗಿತ್ತು. ಇಂತಹ ದುರಂತ ಘಟನೆ ಜೈಪುರ ಜಿಲ್ಲೆ ಚೌಮು ನಗರದ ಉದಯಪುರಿ ಗ್ರಾಮದಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net