More

    ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

    ಮೈಸೂರು: ಪಿಎಚ್​ಡಿ ವಿದ್ಯಾರ್ಥಿನಿಯೊಬ್ಬಳ ಮೇಲೆ ತನ್ನ ಮನೆಯಲ್ಲೇ ಅತ್ಯಾಚಾರಕ್ಕೆ ಯತ್ನಿಸಿ ಪತ್ನಿ ಕೈಗೆ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದೆ.

    ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರನ ವಿರುದ್ಧ ಪತ್ನಿಯೇ ಸಂತ್ರಸ್ತೆ ಜತೆ ಪೊಲೀಸ್​ ಠಾಣೆಗೆ ಬಂದು ಗುರುವಾರ ದೂರು ಕೊಟ್ಟಿದ್ದರು. ನನ್ನ ಗಂಡ ಪ್ರೊ.ರಾಮಚಂದ್ರ ಡಿಪಾರ್ಟ್​​ಮೆಂಟ್​ನಲ್ಲೇ ವಿದ್ಯಾರ್ಥಿನಿಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಇವರ ಬಳಿ ಪಿಎಚ್‌ಡಿ ಮಾರ್ಗದರ್ಶನ ಪಡೆಯುವ ಕೆಲ ಪುರುಷ ವಿದ್ಯಾರ್ಥಿಗಳು ನನ್ನ ಗಂಡನಿಗಾಗಿ ಯುವತಿಯರನ್ನು ಕಳುಹಿಸುತ್ತಿದ್ದರು. ನನ್ನ ಗಂಡ ಹಲವು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಗುರುವಾರ ನಾನು ಕಾಲೇಜಿಗೆ ಹೋಗಿದ್ದೆ. ಆದರೆ, ಸ್ಟಡಿ ಮೆಟೀರಿಯಲ್​ ತೆಗೆದುಕೊಳ್ಳಲೆಂದು ಮನೆಗೆ ವಾಪಸ್ ಬಂದಿದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಯುತ್ತಿದ್ದಂತೆ ವಿದ್ಯಾರ್ಥಿನಿಯಬ್ಬಳು ನನ್ನ ಕಾಲು ಹಿಡಿದುಕೊಂಡು, “ನನ್ನ ಮೇಲೆ ಅತ್ಯಾಚಾರವಾಗಿದೆ” ಎಂದು ಕಣ್ಣೀರಿಟ್ಟಳು. ಕೂಡಲೇ ನನ್ನ ಗಂಡ ಮತ್ತು ಸಂತ್ರಸ್ತ ಯುವತಿ ಇಬ್ಬರನ್ನೂ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ಮತ್ತೆ ಇನ್ಯಾರಿಗೂ ನನ್ನ ಗಂಡಿನಿಂದ ಅನ್ಯಾಯ ಆಗಬಾರದು ಎಂದು ಆರೋಪಿಯ ಪತ್ನಿ, ಮೈಸೂರು ವಿವಿ ಪ್ರಾಧ್ಯಾಪಕಿಯೂ ಆಗಿರುವ ಡಾ.ಲೋಲಾಕ್ಷಿ ಅವರು ಜಯಲಕ್ಷ್ಮೀಪುರಂ ಠಾಣೆ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದರು. ಇದಾದ ಮರುದಿನವೇ ಸಂತ್ರಸ್ತೆ ಉಲ್ಟಾ ಹೊಡೆದಿದ್ದು, ಈ ಕೇಸ್​ ಮತ್ತೊಂದು ತಿರುವು ಪಡೆದಿದೆ.

    ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತ ದೂರಿನ ಪ್ರತಿಗೆ ಸಹಿ ಮತ್ತು ಹೆಬ್ಬೆಟ್ಟು ಹಾಕಿ ನಿನ್ನೆ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದ ಸಂತ್ರಸ್ತೆ ಇದೀಗ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದಾರೆ. ”ನನ್ನ ಮೇಲೆ ಅತ್ಯಾಚಾರ ಆಗಿಲ್ಲ. ಅಂತಹ ಯಾವ ಘಟನೆಯೂ ನಡೆದಿಲ್ಲ. ಪ್ರೊ.ರಾಮಚಂದ್ರ ಅವರು ನನ್ನ ಪಿಎಚ್‌ಡಿ ಮಾರ್ಗದರ್ಶಕರು‌. ಸಂಶೋಧನೆ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಆಗ ಮನೆಗೆ ಬಂದ ರಾಮಚಂದ್ರ ಅವರ ಪತ್ನಿ ಲೋಲಾಕ್ಷಿ ರಂಪಾಟ ಮಾಡಿದ್ರು. ನನ್ನನ್ನು ಹೆದರಿಸಿ, ಬೆದರಿಸಿ ಬಲವಂತವಾಗಿ ದೂರು ಬರೆಸಿಕೊಂಡ್ರು” ಎಂದು ಲೋಲಾಕ್ಷಿ ವಿರುದ್ಧವೇ ಯುವತಿ ದೂರು ಕೊಟ್ಟಿದ್ದಾರೆ.

    ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

    ತುಂಬಾ ಇಷ್ಟಪಟ್ಟು ಮದ್ವೆಯಾದ 5 ತಿಂಗಳಿಗೆ ದುರಂತ ಅಂತ್ಯಕಂಡ ಪ್ರೇಯಸಿ! ಮುದ್ದಾದ ಜೋಡಿ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

    ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts